ರಾಯಲ್ ಎನ್‌ಫೀಲ್ಡ್ ಬೈಕ್ ಕಳ್ಳರ ಬಂಧನ, 18 ಲಕ್ಷ ಮೌಲ್ಯದ 12 ಬೈಕ್‌ಗಳು ವಶ

ಲಕ್ಷ ರೂಪಾಯಿಯ ಎನ್ಫೀಲ್ಡ್, ಸೇಲ್ ಆಗುತ್ತಿದ್ದು ಐದು ಸಾವಿರಕ್ಕೆ!

 

ದಾವಣಗೆರೆ: ಜಿಲ್ಲೆ ಹಾಗೂ ಅಂತರ್ ಜಿಲ್ಲೆಗಳಲ್ಲಿ ಬೈಕುಗಳನ್ನು ಕದಿಯುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಇವರು ಕದ್ದಿರುವ ಬೈಕುಗಳಲ್ಲಿ 7 ರಾಯಲ್ ಎನ್‌ಫೀಲ್ಡ್ ಬೈಕುಗಳಿರುವುದು ವಿಶೇಷ. ಇವುಗಳ ಜೊತೆ 5 ಸ್ಪೆಂಡರ್ ಪ್ಲಸ್ ಬೈಕ್‌ಗಳು ಸೇರಿ ಒಟ್ಟು 12 ಬೈಕುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಸೂಫಿಯಾನ್ (20) ಹಾಗೂ ಖಾತ್ರಿ ಚೌದರಿ ಯಾನೆ ಜಾವೀದ್ (24) ಎಂಬುವವರೇ ಈ ಬೈಕ್ ಕಳ್ಳರು. ಈ ಆರೋಪಿಗಳನ್ನು ವಿಚಾರಣೆಗೊಳಪಡಿಸಿದಾಗ ಅವರು ದಾವಣಗೆರೆ ಜಿಲ್ಲೆಯೂ ಸೇರಿದಂತೆ ಬೇರೆ ಬೇರೆ ಜಿಲ್ಲೆಗಳಲ್ಲೂ ಬೈಕುಗಳನ್ನು ಕಳ್ಳತನ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ.

ಕಳೆದ ಮೇ 21ರಂದು ಆರಿಫ್‌ವುಲ್ಲಾ ಎಂಬುವವರು ಮಿಲ್ಲತ್ ಕಾಲೇಜು ಬಳಿಯ 7ನೇ ಕ್ರಾಸ್ ಬಿಡಿ ಲೇಔಟ್ ಮುಂಭಾಗ ತಮ್ಮ ಹೀರೋ ಸ್ಪೆಂಡರ್ ಬೈಕ್ ಕಳುವುದಾಗಿ ಎಂದು ಅಜಾದ್ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇದೀಗ ಆರೋಪಿಗಳನ್ನು ಬಂಧಿಸಿದ್ದಾರೆ.

ಆರೋಪಿಗಳ ಪತ್ತೆ ಕಾರ್ಯದಲ್ಲಿ ಯಶಸ್ವಿಯಾದ ಆಜಾದ ನಗರ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕ ಇಮ್ರಾನ್ ಬೇಗ್ ಪೊಲೀಸ್ ಉಪ ನಿರೀಕ್ಷಕರುಗಳಾದ ಕಾಂತರಾಜ್ ಎಸ್. ಮತ್ತು ಶ್ರೀಮತಿ ಶೃತಿ ಎಂ., ಅಪರಾಧ ವಿಭಾಗ ಸಿಬ್ಬಂದಿಗಳಾದ ಮಂಜುನಾಥ ನಾಯ್ಕ್, ತಿಪ್ಪೇಸ್ವಾಮಿ, ದಯಾನಂದ, ಕೃಷ್ಣ ನಂದ್ಯಾಲ್, ಕರಿಬಸಪ್ಪ, ಪ್ರದೀಪ್ ಕುಮಾರ, ಮಡ್ಡಿ ಹನುಮಂತಪ್ಪ, ರಾಘವೇಂದ್ರ, ಶಾಂತರಾಜ್ ಇವರುಗಳನ್ನು ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಅರುಣ ಕೆ. ಶ್ಲಾಘಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!