ದೇಶ ತೊರೆಯಲಿದ್ದ ಮರಳು ಮಾಫಿಯಾ ಕಿಂಗ್ ಪಿನ್ ಇಮ್ರಾನ್ ಸಿದ್ದೀಕಿ.! ಪಾಸ್ ಪೋರ್ಟ್ ವೀಸಾ ಸೀಜ್ ಮಾಡಿಸಿದ ಎಸ್.ಪಿ ರಿಷ್ಯಂತ್

ದಾವಣಗೆರೆ: ತುಂಗಭದ್ರಾ ನದಿ ತೀರದಲ್ಲಿ ಮರಳು ಗಣಿಗಾರಿಕೆ ಮಾಡುವವರನ್ನು ಹೆದರಿಸಿ ಹಣ ಮಾಡುತ್ತಿದ್ದ ಮೈಸೂರು ಮೂಲದ ಇಮ್ರಾನ್ ಸಿದ್ದೀಕಿ ದೇಶ ತೊರೆದು ವಿದೇಶಕ್ಕೆ ಹಾರುವ ಎಲ್ಲಾ ಸಿದ್ದತೆ ಕೈಗೊಂಡಿದ್ದ ಎನ್ನಲಾಗಿದ್ದು ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಂಡ ಇಮ್ರಾನ್ ಸಿದ್ದೀಕಿ ಹಾರಾಟಕ್ಕೆ ಬ್ರೇಕ್ ಹಾಕಿ ಪಾಸ್‌ಪೋರ್ಟ್ ಮತ್ತು ವೀಸಾ ಸೀಜ್ ಮಾಡಿದ್ದಾರೆ.

ಮರಳು ಗಣಿಗಾರಿಕೆ ಮಾಡುವವರ ಗುರಿಯಾಗಿಸಿಕೊಂಡು ಪ್ರತಿ ತಿಂಗಳು ಮಾಮೂಲಿ ವಸೂಲಿಗೆ ಇಳಿಯುತ್ತಿದ್ದ ಇಮ್ರಾನ್ ಸಿದ್ದೀಕಿ ಜೈಲಿನಲ್ಲಿದ್ದಾನೆ. ಈ ಪ್ರಕರಣದಿಂದ ಪಾರಾಗಲು ಹೊರದೇಶಕ್ಕೆ ಹೋಗುವ ತಂತ್ರ ರೂಪಿಸಿದ್ದ ಈ ಮಾಹಿತಿ ತಿಳಿದ ಪೊಲೀಸ್ ಇಲಾಖೆ ಈತನನ್ನು ತಡೆದು ಪಾಸ್‌ಪೋರ್ಟ್, ವೀಸಾ ಸೀಜ್ ಮಾಡಿದ್ದಾರೆ.

ಅಷ್ಟೇಅಲ್ಲದೆ ಈ ಕುರಿತ ಪ್ರಕರಣದ ಮುಂದಿನ ತನಿಖೆ ನಡೆಸದಂತೆ ಹೈಕೋರ್ಟ್ ನಿಂದ ಸ್ಟೇ ಆರ್ಡರ್ ಕೂಡಾ ತಂದಿದ್ದು, ಪೊಲೀಸ್ ಇಲಾಖೆ (ಸ್ಟೇ ತೆರವು) ತನಿಖೆಗೆ ಸೂಚಿಸುವಂತೆ ಮನವಿ ಮಾಡಿಕೊಂಡಿದೆ. ಹೈಕೋರ್ಟ್ ಅನುಮತಿ ನಂತರ ಇನ್‌ವೆಸ್ಟಿಕೇಷನ್ ಮುಂದುವರೆಯಲಿದೆ. ಕೋರ್ಟ್ ಆದೇಶದಂತೆ ವೀಸಾ, ಪಾಸ್‌ಪೋರ್ಟ್ ತಲುಪಿಸಬೇಕಿತ್ತು. ಆದ್ರೆ ಇಲ್ಲಿಯವರೆಗೆ ಕೊಟ್ಟಿಲ್ಲ ಹೈಕೋರ್ಟ್ ಆದೇಶದ ನಂತರ ಮುಂದಿನ ತನಿಕೆ ಕೈಗೊಳ್ಳುವುದಾಗಿ ಎಂದು ಎಸ್.ಪಿ ರಿಷ್ಯಂತ್ ಮಾಹಿತಿ ನೀಡಿದ್ದಾರೆ.

ದಾವಣಗೆರೆ ನಗರದ ಮರಳು ವ್ಯಾಪಾರಿ ಮುಬಾರಕ್ ಎಂಬುವವರು ಮರಳು ಗಣಿಗಾರಿಕೆ ಮಾಡಲು ಈತನಿಗೆ ತಿಂಗಳಿಗೆ 4 ಲಕ್ಷ ಕೊಡಬೇಕೆಂದು ಹೆದರಿಸುತ್ತಿದ್ದಾನೆ ಎಂದು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನ ಮೇಲೆ ಮೊದಲು ಪ್ರಕರಣ ದಾಖಲಾಗಿತ್ತು. ನಂತರ ಎಸ್ಪಿ ರಿಷ್ಯಂತ್, ಡಿಸಿಆರ್‌ಬಿ ಡಿವೈಎಸ್ಪಿ ಬಸವರಾಜ್ ನೇತೃತ್ವದಲ್ಲಿ ತಂಡ ರಚಿಸಿ ರೆಡ್ ಹ್ಯಾಂಡ್ ಆಗಿ ಹಿಡಿದು ದಾವಣಗೆರೆ ಜೈಲಿಗೆ ಹಾಕಿತ್ತು. ಈ ಪ್ರಕರಣಕ್ಕೆ ಸಂಬ0ಧಪಟ್ಟ0ತೆ ಜೈಲಿನಲ್ಲಿ ಇರುವಾಗ ಇತ್ತೀಚೆಗೆ ಕೋರ್ಟ್ ನಿಂದ ಬೇಲ್ ಕೂಡ ಪಡೆದಿದ್ದ. ಇದಾದ ಬಳಿಕ ದಾವಣಗೆರೆ ನಿವಾಸಿ ಅಶೋಕ್ ಎಂಬ ಉದ್ಯಮಿ, ಹಫ್ತಾ ವಸೂಲಿಗೆ ಸಂಬ0ಧಪಟ್ಟ0ತೆ ಇಮ್ರಾನ್ ಸಿದ್ದೀಕಿ ಮೇಲೆ ಹರಿಹರ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆದರೆ ಈ ಪ್ರಕರಣದಲ್ಲಿ ಇನ್ನೂ ಬೇಲ್ ಸಿಕ್ಕಿಲ್ಲ.

ಐಪಿಎಸ್ ಅಧಿಕಾರಿಗಳ ಕೃಪಾಕಟಾಕ್ಷ.!

ಈ ಹಿಂದೆ ಇದ್ದ ಐಪಿಎಸ್ ಅಧಿಕಾರಿಗಳಿಬ್ಬರ ಕೃಪಾಕಟಾಕ್ಷ ಇವನಿಗೆ ಇದ್ದಿದ್ದರಿಂದ ಮರಳು ವಸೂಲಿ ಮಾಡುತ್ತಿದ್ದವರ ಬಳಿ ಹಫ್ತಾ ವಸೂಲಿಗೆ ಇಳಿಯುತ್ತಾನೆ. ತನ್ನ ಮಾತನ್ನ ವಲಯದಲ್ಲಿ ಇರುವ ಯಾವ ಪೊಲೀಸ್ ಮಾತು ಕೇಳೋದಿಲ್ಲ, ಅಂತವರಿಗೆ ಉನ್ನತ ಐಪಿಎಸ್ ಅಧಿಕಾರಿಗಳ ಮೂಲಕ ಪೋನ್ ಮಾಡಿಸಿ ಹಣ ವಸೂಲಿ ಮಾಡುತ್ತಿದ್ದ. ಇಲ್ಲದಿದ್ದರೆ ಸ್ಥಳೀಯ ಪೊಲೀಸರ ಮೇಲೆ ಇಲ್ಲಸಲ್ಲದ ದೂರು ಹೇಳುವುದು, ಟ್ರಾನ್ಸಫರ್, ಸಸ್ಪೆಂಡ್ ಮಾಡಿಸುವುದು ಮಾಡುತ್ತಿದ್ದ, ಈ ಭಯಕ್ಕೆ ಹೆದರಿ ಕೆಲವರು ಹಫ್ತಾ ವಸೂಲಿ ಮಾಡಿ ಐಪಿಎಸ್ ಅಧಿಕಾರಿಯೊಬ್ಬರಿಗೆ ಡಿವೈಎಸ್‌ಪಿ, ಇನ್ಸ್ಪೆಕ್ಟರ್ ಹಾಗೂ ಇಮ್ರಾನ್ ಸಿದ್ದೀಖ್ ಮೂಲಕ ಹಣ ನೀಡುತ್ತಿದ್ದರು ಎಂಬ ಆರೋಪ ದಟ್ಟವಾಗಿ ಕೇಳಿ ಬಂದಿತ್ತು.

ಇಮ್ರಾನ್ ಸಿದ್ಧಿಕಿ ಬಹುತೇಕ ದಂಧೆಗಳ ಕಿಂಗ್ ಪಿನ್:

ದಿನ, ವಾರ, ತಿಂಗಳ ಲೆಕ್ಕದಲ್ಲಿ ಹಫ್ತಾ ವಸೂಲಿ ಮಾಡಿಕೊಡ್ತಿದ್ದ. ಈ ನಾಲ್ಕು ಜಿಲ್ಲೆಗಳ ಮಟ್ಕಾ, ಇಸ್ಪೀಟ್, ಮರಳು, ಅನ್ನಭಾಗ್ಯ ಅಕ್ಕಿ, ಸೇರಿದಂತೆ ಎಲ್ಲ ರೀತಿಯ ದಂಧೆಗಳಿಗೆ ಎಲ್ಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅನುಮತಿ ಕೊಡಿಸುತ್ತಿದ್ದ ಎಂಬ ಮಾತನ್ನು ಪೊಲೀಸ್ ಮೂಲಗಳು ತಿಳಿಸಿದ್ದವು. ಇತ್ತೀಚೆಗೆ ರಾಜ್ಯದ ಗೃಹಮಂತ್ರಿ ಆರಗ ಜ್ಞಾನೇಂದ್ರ ಕೂಡ ಈ ವ್ಯಕ್ತಿಯ ವಿರುದ್ದ ತನಿಖೆ ನಡೆಯುತ್ತಿದೆ ಹಾಗೂ ಉನ್ನತ ಅಧಿಕಾರಿಗಳು ಆತನ ಸಂಪರ್ಕವಿದ್ದರೂ ಕೂಡ ತನಿಖೆ ಮಾಡಿಸುತ್ತೇವೆ ಎಂದಿದ್ದರು.

garudavoice21@gmail.com 9740365719

Leave a Reply

Your email address will not be published. Required fields are marked *

error: Content is protected !!