ಶಿವಮೊಗ್ಗದಲ್ಲಿ ರಾಜ್ಯ ಪೌರ ಕಾರ್ಮಿಕರ ಮಹಾಸಂಘದ ರಾಜ್ಯ ಸಮಿತಿ ಸಭೆ

ದಾವಣಗೆರೆ: ಶಿವಮೊಗ್ಗ ನಗರದಲ್ಲಿ ಇಂದು ಪೌರ ಕಾರ್ಮಿಕರ ಹಾಗೂ ಮಹಾನಗರ ಪಾಲಿಕೆಯ ಹಾಗೂ ಇತರೆ ಗುತ್ತಿಗೆ ಕಾರ್ಮಿಕರ ವಿವಿಧ ಬೇಡಿಕೆಗಳು ಮತ್ತು ರಾಜ್ಯ ಪೌರ ಕಾರ್ಮಿಕರ ಮಹಾಸಂಘದ ರಾಜ್ಯ ಸಮಿತಿಯ ರಾಜ್ಯ ಪದಾಧಿಕಾರಿಗಳ ಸಭೆಯನ್ನು ನಡೆಸಲಾಯಿತು.

ಈ ಸಭೆಯಲ್ಲಿ ವಿವಿಧ ಜಿಲ್ಲೆಗಳ ಮಹಾನಗರ ಪಾಲಿಕೆ, ನಗರ ಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳಲ್ಲಿನ ನೇರ ಪಾವತಿ, ಗುತ್ತಿಗೆ, ಸಮಾನ ಕೆಲಸಕ್ಕೆ ಸಮಾನ ವೇತನ, ಪೌರಕಾರ್ಮಿಕರು, ಒಳಚರಂಡಿ ಸ್ವಚ್ಚತಾ ಕಾರ್ಮಿಕರ, ಲೋಡರ್ಸ್, ಕ್ಲೀನರ್ಸ್, ಕಸದ ವಾಹನ ಚಾಲಕರ ಸಮಸ್ಯೆಗಳು, ಜಿಲ್ಲೆಗಳಲ್ಲಿ ಸದರಿ ಕಾರ್ಮಿಕರ ಜೊತೆ ಕೆಲಸ ಮಾಡುತ್ತಿರುವ ಸಂಘಟನೆಗಳನ್ನ ಒಟ್ಟು ಸೇರಿಸಿ ರಾಜ್ಯ ಮಟ್ಟದ ಸಮಾನ್ವಯ ಸಮಿತಿ ರಚನೆ, ಸಮನ್ವಯ ಸಮಿತಿಗೆ ಪಧಾದಿಕಾರಿಗಳ ನೇಮಕ ಮಾಡುವ ಕುರಿತು ಚರ್ಚಿಸಲಾಯಿತು. ಅಷ್ಟೇಅಲ್ಲದೆ ರಾಜ್ಯ ಮಟ್ಟದಲ್ಲಿ ಏಕಕಾಲಕ್ಕೆ ಸ್ವಚ್ಚತಾ ಕಾರ್ಯ ಸ್ಥಗಿತ ಮಾಡಿ ಖಾಯಂಗಾಗಿ ಪ್ರತಿಭಟಿಸುವುದು, ದಿನಾಂಕ ನಿಗದಿಗೊಳಿಸುವುದು ಮತ್ತು ಇತರೆ ವಿಷಯಗಳು ಚರ್ಚೆ ನಡೆಸಲಾಯಿತು.

ಈ ವೇಳೆ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಮಾಜಿ ಅಧ್ಯಕ್ಷರು ಹಾಗೂ ಸಂಘದ ರಾಜ್ಯಾಧ್ಯಕ್ಷರಾದ ನಾರಾಯಣ್ ಮೈಸೂರು ಮತ್ತು ಸಂಘದ ರಾಜ್ಯ ಕಾರ್ಯಾಧ್ಯಕ್ಷರಾದ ಹನುಮಂತಪ್ಪ ಎಲ್.ಎಂ. ದಾವಣಗೆರೆ, ರಾಜ್ಯ ಪದಾಧಿಕಾರಿಗಳು ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪೌರ ಕಾರ್ಮಿಕ ಸಂಘದ ಪದಾಧಿಕಾರಿಗಳು ಇದ್ದರು. ದಾವಣಗೆರೆ ಮಹಾನಗರ ಪಾಲಿಕೆ ‘ಡಿ’ ಗ್ರೂಪ್ ಪೌರಕಾರ್ಮಿಕರು ಹಾಗೂ ನೇರ ಪಾವತಿ ಪೌರಕಾರ್ಮಿಕರು ಸಂಘ ಪದಾಧಿಕಾರಿಗಳು, ಉಪಾಧ್ಯಕ್ಷರು, ಪ್ರಸನ್ನ, ಉಮೇಶ್, ಚಂದ್ರಶೇಖರ, ಶಿವರಾಜ್, ರೇಣುಕಮ್ಮ, ಪರಶುರಾಮ್, ಬಸವರಾಜ್, ಅಜ್ಜಪ್ಪ, ಗುರುರಾಜ್, ಪರಮೇಶ್ವರಪ್ಪ ಪಾಲ್ಗೊಂಡಿದ್ದರು.

 

garudavoice21@gmail.com 9740365719

Leave a Reply

Your email address will not be published. Required fields are marked *

error: Content is protected !!