students; ವಿದ್ಯಾರ್ಥಿಗಳು ಪೋಷಕರಿಗೆ ಕೊಡಬಹುದಾದ ದೊಡ್ಡ ಉಡುಗೊರೆ ಫಲಿತಾಂಶ

ಚಿತ್ರದುರ್ಗ, ಆ.21: ನಗರದ ಎಸ್ ಎಲ್ ವಿ ಪದವಿಪೂರ್ವ ಕಾಲೇಜಿನಲ್ಲಿ 2023-24ನೇ ಸಾಲಿನ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಹಾಗೂ ದ್ವಿತೀಯ ಪಿಯುಸಿಯಲ್ಲಿ ಅತ್ಯುನ್ನತ ದರ್ಜೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ (students) ಪ್ರತಿಭಾ ಪುರಸ್ಕಾರ ಸಮಾರಂಭ ಮತ್ತು ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಹೊಂಗಿರಣ ಸ್ವಾಗತ ಸಮಾರಂಭವನ್ನು ಆಯೋಜಿಸಲಾಗಿತ್ತು.

ಈ ವೇಳೆ ಮಾತನಾಡಿದ, ದೇವರಾಜ್ ಅರಸ್ ಶಿಕ್ಷಣ ಸಂಸ್ಥೆಯ ಕಾರ್ಯನಿರ್ವಹಣಾಧಿಕಾರಿ ರಘು ಚಂದನ್ ಅವರು ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಅವಧಿಯಲ್ಲಿ ತಮ್ಮ ಪೋಷಕರಿಗೆ ಕೊಡಬಹುದಾದ ದೊಡ್ಡ ಉಡುಗೊರೆ ಎಂದರೆ ನಿಮ್ಮ ಉತ್ತಮ ಫಲಿತಾಂಶ (result). ಮ್ಯಾರಥಾನ್ ಓಟದಂತೆ ಸಾಗುತ್ತಿರುವ ಈ ಸ್ಮರ್ಧಾತ್ಮಕ ಪ್ರಪಂಚದಲ್ಲಿ ನೀವು ಜಯಶಾಲಿಗಳಾಗಬೇಕಾದರೆ ಬಾಹ್ಯ ಪ್ರಪಂಚದ ಮೋಹಕ್ಕೆ ಒಳಗಾಗದೆ ನಿರಂತರ ಪರಿಶ್ರಮ, ಪ್ರಾಮಾಣಿಕ ಪ್ರಯತ್ನ ಅಗತ್ಯ, ಆಗ ಮಾತ್ರ ನೀವು ಕಂಡಂತಹ ಕನಸುಗಳು ನನಸಾಗುತ್ತದೆ ಎಂದು ತಿಳಿಸಿದರು.

engineer couples; ಅಮೇರಿಕಾದಲ್ಲಿ ದಾವಣಗೆರೆ ಯುವ ಎಂಜಿನಿಯರ್ ದಂಪತಿ ದಾರುಣ ಸಾವು

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ಎಲ್ ವಿ ಪಿಯು ಕಾಲೇಜಿನ ಪ್ರಾಂಶುಪಾಲ ಕೊಟ್ರೇಶ್ ಬಿ.ಎ., ಅವರು ವಹಿಸಿದ್ದರು. ಎಸ್ ಎಲ್ ವಿ ಪಿಯು ಕಾಲೇಜಿನ ಉಪ ಪ್ರಾಂಶುಪಾಲರು ಕೇಶವಮೂರ್ತಿ ಯು, ಸಹಾಯಕ ಪ್ರಾಧ್ಯಾಪಕರು ಆರ್ ಎಸ್ ರಾಜು, ಶ್ರೀ ವೆಂಕಟೇಶ್ವರ ಶಿಕ್ಷಣ ಮಹಾವಿದ್ಯಾಲಯದ ಮುಖ್ಯೋಪಾಧ್ಯಾಯರು ತಿಪ್ಪೇಸ್ವಾಮಿ ಆರ್.ಸಿ., ಉಪನ್ಯಾಸಕರಾದ ರಾಘವೇಂದ್ರ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಾದ ವೈಷ್ಣವಿ ಪ್ರಾರ್ಥಿಸಿದರು. ಅಂಕಿತ ಸ್ವಾಗತಿಸಿದರು, ಸ್ನೇಹ ವಂದನಾಪಣೆ ಮಾಡಿದರು. ದಿವ್ಯ &ಹಂಸ ಕಾರ್ಯಕ್ರಮದ ನಿರೂಪಣೆ ಮಾಡಿದರು. ಇದೇ ಸಂದರ್ಭದಲ್ಲಿ ಉಪನ್ಯಾಸಕರಾದ ರೇಷ್ಮಾ ಯು, ಶಶಿಧರ್ ಕೆ. ನರಸಿಂಹಮೂರ್ತಿ, ಮನು, ಬಸವರಾಜ್, ವಿಂದ್ಯಾ ಸಿ ಸಜ್ಜನ್, ಅಕ್ಷತಾ, ಉಮೇಶ್, ಸಂತೋಷ್, ಸುಪ್ರಿತ, ಸಯೀದಭಾನು, ಸೌಮ್ಯ ರಾಣಿ. ಉಪಸ್ಥಿತರಿದ್ದರು.

ಮುಖ್ಯಮಂತ್ರಿಯವರನ್ನು ಭೇಟಿಯಾದ ಅಮೆರಿಕದ ಕಾನ್ಸಲ್‌ ಜನರಲ್‌ ಎರಡನೇ ಹಂತದ ನಗರಗಳಲ್ಲಿಯೂ ಹೂಡಿಕೆಗೆ ಅವಕಾಶ: ಸಿಎಂ ಸಿದ್ದರಾಮಯ್ಯ

ಸನ್ಮಾನಗೊಂಡ ವಿದ್ಯಾರ್ಥಿಗಳು

ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಶೇ. 97ರಷ್ಟು ಅಂಕಗಳನ್ನು ಪಡೆಯುವುದರೊಂದಿಗೆ ಪ್ರಥಮ ಸ್ಥಾನ ಪಡೆದ ಐಶ್ವರ್ಯ. ಕೆ, ದ್ವಿತೀಯ ಸ್ಥಾನ ಪಡೆದ ಭರತ್ ಸಾಗರ್( ಶೇ.93.33), ತೃತೀಯ ಸ್ಥಾನ ಪಡೆದ ಆದಿತ್ಯ ಡಿ (ಶೇ.90.83) ವಾಣಿಜ್ಯ ವಿಭಾಗದಲ್ಲಿ (ಶೇ.94.67) ಅಂಕಗಳನ್ನು ಗಳಿಸಿ ಪ್ರಥಮ ಸ್ಥಾನ ಪಡೆದ ಹೇಮಶ್ರೀ.ಎಂ, ದ್ವಿತೀಯ ಸ್ಥಾನ ಪಡೆದ ಮೊಹಮ್ಮದ್ ಸುಹೇಲ್(ಶೇ.92.50), ತೃತೀಯ ಸ್ಥಾನ ಪಡೆದ ಆಯಷ ಖಾನ್(ಶೇ.92.33) ಅವರನ್ನು ಸನ್ಮಾನಿಸಲಾಯಿತು

Leave a Reply

Your email address will not be published. Required fields are marked *

error: Content is protected !!