ಮಾಡಿದ ಕೆಲಸಗಳೇ ಶ್ರೀ ರಕ್ಷೆ :  ಮಾಯಕೊಂಡ ಕಾಂಗ್ರೆಸ್ ಅಭ್ಯರ್ಥಿ ಬಸವಂತಪ್ಪ

ಮಾಯಕೊಂಡ : ನನಗೆ ಹಣ ಮುಖ್ಯವಲ್ಲ, ನನ್ನ ಬಳಿ ಏನೂ ಇಲ್ಲ..ಆದರೆ ಜನರ ಋಣ ಇದೆ ಅದನ್ನು ತೀರಿಸಲು ಚುನಾವಣೆಗೆ ನಿಂತಿದ್ದು, ಕೊರೊನಾ ಸಂದರ್ಭದಲ್ಲಿ ನಾನು ಮಾಡಿದ ಕೆಲಸಗಳೇ ನನಗೆ ಶ್ರೀ ರಕ್ಷೆಘಿ. ಅವುಗಳು ನನ್ನ ಕೈ ಹಿಡಿಯುತ್ತದೆ ಎಂದು ಮಾಯಕೊಂಡ ಕಾಂಗ್ರೆಸ್ ಅಭ್ಯರ್ಥಿ ಬಸವಂತಪ್ಪ ಹೇಳಿದರು.’

ಆನಗೋಡಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಕಳೆದ ಬಾರಿ ಕಡಿಮೆ ಅಂತರದಿಂದ ಸೋತಿದ್ದೇಘಿ..ಆದರೆ ಈ ಬಾರಿ ಗೆಲುವಿನ ದಡ ಮುಟ್ಟುವೆ..ಹೋದ ಕಡೆಯಲ್ಲಾ ಜನರಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಗೆದ್ದೇ, ಗೆಲ್ಲುತ್ತೇನೆ ಎನ್ನುವ ವಿಶ್ವಾಸವಿದೆ. ಕೊರೊನಾ ಸಂದರ್ಭದಲ್ಲಿ ಜಾತಿ, ಮತ, ಬೇಧ ನೋಡದೆ ಕೆಲಸ ಮಾಡಿದ್ದೇನೆ. ರೈತರ ತರಕಾರಿಗಳನ್ನು ಖರೀದಿಸಿ ಉಚಿತವಾಗಿ ನೀಡಿದ್ದೇನೆ. ಕಷ್ಟ ಎಂದಾಗ ಹಗಲು ರಾತ್ರಿ ಎನ್ನದೇ ಜನರ ಬಳಿ ಹೋಗಿದ್ದೇನೆ. ನನ್ನ ಹತ್ರ ಏನೂ ಇಲ್ಲ, ಆದರೆ ಜನ ಇದ್ದಾರೆ, ಪ್ರೀತಿ ಜತೆಗೆ ವಿಶ್ವಾಸ ತೋರಿದ್ದಾರೆ ಎಂದರು.

ನನಗೆ ಯಾರು ಪ್ರತಿಸ್ಪರ್ಧಿ ಇಲ್ಲ. ನನಗೆ ನಾನೇ ಪ್ರತಿ ಸ್ಪರ್ಧಿ. ಮುಂದಿನ ದಿನಗಳಲ್ಲಿ ದಾವಣಗೆರೆ ಅಭಿವೃದ್ಧಿ ಹರಿಕಾರ ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಮಾಯಕೊಂಡದಲ್ಲಿ ಪ್ರಚಾರಕ್ಕೆ ಬರುತ್ತಾರೆ. ಈಗ ಎಲ್ಲ ಕಡೆ ಕಾಂಗ್ರೆಸ್ ಅಲೆ ಇದೆ. ನಮ್ಮ ಸರಕಾರ ಬರುತ್ತದೆ. ಮಾಯಕೊಂಡದ ಅಭಿವೃದ್ಧಿ ಮಾಡುತ್ತೇನೆ ಎಂದು ಆಶ್ವಾಸನೆ ನೀಡಿದರು.

ಮಾಯಕೊಂಡ ಎಂಬುದು ಬರಗಾಲದ ಪ್ರದೇಶ ಇಲ್ಲಿನ ರೈತಾಪಿ ವರ್ಗ ಕೃಷಿಹೊಂಡದ ಮೂಲಕ ಬೆಳೆ ಬೆಳೆಯುತ್ತಿದ್ದರು. ಆದರೀಗ ಬಿಜೆಪಿ ಸರಕಾರ ಕೃಷಿ ಹೊಂಡವನ್ನು ತೆಗೆದಿದೆ. ಇದರಿಂದ ರೈತರಿಗೆ ಸಾಕಷ್ಟು ತೊಂದರೆಯಾಗಿದೆ. ಕಾಂಗ್ರೆಸ್ ಸರಕಾರ ಬಂದ್ರೆ ಮಾಯಕೊಂಡ ಅಭಿವೃದ್ಧಿಯಾಗುವುದು ಎರಡು ಮಾತಿಲ್ಲ ಎಂದು ಬಸವಂತಪ್ಪ ವಿಶ್ವಾಸ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *

error: Content is protected !!