theft; ಕಳ್ಳತನ; 10 ಮಂದಿ ಆರೋಪಿಗಳ ಬಂಧನ

ಹೈಟೆಕ್‌, ವೇಶ್ಯಾವಾಟಿಕೆ, ಅಡ್ಡೆ, ಪೊಲೀಸ, ದಾಳಿ, ಬಂಧನ,

ಹುಬ್ಬಳ್ಳಿ, ನ.04: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟ್ ನ ರಾಯಪುರ ಕಚೇರಿಯಲ್ಲಿ ಅಕ್ಟೋಬರ್​ 24ರಂದು ನಡೆದಿದ್ದ ಕಳ್ಳತನ (theft)  ಪ್ರಕರಣವನ್ನು ಭೇದಿಸಿ 10 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಇದರಲ್ಲಿ ಮೂವರು ಆರೋಪಿಗಳು ಟ್ರಸ್ಟ್‌ನ ಕೆಲಸವರಾಗಿದ್ದಾರೆ ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ.

ಹುಬ್ಬಳ್ಳಿ – ಧಾರವಾಡ ಪೊಲೀಸ್​ ಆಯುಕ್ತೆ ರೇಣುಕಾ ಸುಕುಮಾರ್​ ಅವರು ಮಾಧ್ಯಮದವರೊಂದಿಗೆ ಮಾತನಾಡಿ, “ಈ ಪ್ರಕರಣ ಪೊಲೀಸರಿಗೆ ಸವಾಲಾಗಿತ್ತು. ಘಟನಾ ಸ್ಥಳ ಪರಿಶೀಲನೆ ಮಾಡಿದಾಗ ಸಿಸಿಟಿವಿ ಕ್ಯಾಮೆರಾ ಸೇರಿದಂತೆ ಯಾವುದೇ ಕುರುಹುಗಳನ್ನು ಆರೋಪಿಗಳು ಪೊಲೀಸರಿಗೆ ಬಿಟ್ಟುಕೊಟ್ಟಿರಲಿಲ್ಲ.

bhadra dam; ಭದ್ರಾ ನಾಲೆಗಳ ಅಕ್ರಮ ಪಂಪ್‍ಸೆಟ್‍ಗಳ ತೆರವಿಗೆ ಜಿಲ್ಲಾಧಿಕಾರಿ ಸೂಚನೆ

ಪ್ರಕರಣ ಸಂಬಂಧ ವಿದ್ಯಾನಗರ ಸಬ್​ ಇನ್ಸ್​ಪೆಕ್ಟರ್​ ಸಂಗಮೇಶ್​ ನೇತೃತ್ವದಲ್ಲಿ ತಂಡವನ್ನು ರಚಿಸಲಾಗಿತ್ತು. ತಂಡವು ಯಾವುದೇ ಕುರುಹುಗಳಿಲ್ಲದ ಈ ಪ್ರಕರಣವನ್ನು ವೈಜ್ಞಾನಿಕವಾಗಿ ತನಿಖೆ ನಡೆಸಿ, ಎಲ್ಲ ಪೊಲೀಸರ ಸಹಯೋಗದಲ್ಲಿ ಭೇದಿಸುವಲ್ಲಿ ಯಶಸ್ವಿಯಾಗಿದೆ. ಆರೋಪಿಗಳನ್ನು ಬಂಧಿಸಿ ₹79,89,870 ಲಕ್ಷ ನಗದು ಮತ್ತು ಅಪರಾಧಕ್ಕಾಗಿ ಬಳಸಿದ್ದ ಕಾರು, ಮೊಬೈಲ್​ ಸೇರಿ ₹85,89,770 ಲಕ್ಷ ಸೊತ್ತನ್ನು ವಶಪಡಿಕೊಂಡಿದ್ದೇವೆ. ಬಂಧಿತ ಆರೋಪಿಗಳಲ್ಲಿ ಮೂವರು ಆ ಟ್ರಸ್ಟ್​ನಲ್ಲಿಯೇ ಕೆಲಸ ಮಾಡುತ್ತಿದ್ದರು” ಎಂದು ತಿಳಿಸಿದರು.

“ಕುಶಾಲ್​ ಕುಮಾರ್​, ಬಸವರಾಜ್​, ಮಹಾಂತೇಶ್ ಟ್ರಸ್ಟ್​ನ​ ಬಂಧಿತ ಆರೋಪಿಗಳಾಗಿದ್ದಾರೆ. ಪ್ರಾಥಮಿಕವಾಗಿ ಇವರು ಕಳ್ಳತನಕ್ಕೆ ಯೋಜನೆಯನ್ನು ಮಾಡಿಕೊಂಡು ಇತರೆ 7 ಮಂದಿ ಆರೋಪಿಗಳನ್ನು ಜೊತೆ ಸೇರಿ ಈ ಕೃತ್ಯ ಎಸಗಿದ್ದಾರೆ. ಜಿಲಾನಿ, ಪರಶುರಾಮ, ರಂಗಪ್ಪ, ಮಂಜುನಾಥ, ಕಿರಣ, ರಜಾಕ್ ಮತ್ತು ವೀರೇಶ ಇನ್ನುಳಿದ ಆರೋಪಿಗಳಾಗಿದ್ದಾರೆ” ಎಂದು ಮಾಹಿತಿ ನೀಡಿದರು.

 

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!