theft; ಚೌಟ್ರಿ ಕಳ್ಳತನ, ಆರೋಪಿ ಬಂಧನ, ಬಂಗಾರದ ಆಭರಣ ವಶ

ದಾವಣಗೆರೆ, ನ.07: ಸ್ನೇಹಿತೆಯ ಮದುವೆಗೆ ಹೋದ ಸಂದರ್ಭದಲ್ಲಿ ಕಳ್ಳತನವಾಗಿದ್ದ (theft)  32 ಗ್ರಾಂ ತೂಕದ ಬಂಗಾರವನ್ನು ವಶಕ್ಕೆ ತೆಗೆದುಕೊಂಡು ಆರೋಪಿಯನ್ನು ಬಂಧಿಸುವಲ್ಲಿ ದಾವಣಗೆರೆ ಪೊಲೀಸರು ಯಶಸ್ವಿಯಾಗಿದ್ದಾರೆ.

ದಾವಣಗೆರೆ ನಿವಾಸಿಯಾದ ಆರೋಪಿ ಕಿರಣ್ ನಾಯ್ಕ ಆರ್ (26) ಅವರನ್ನು ಬಂಧಿಸಲಾಗಿದೆ. ಈತನಿಂದ ಒಟ್ಟು 1,80,000 ರೂ. ಬೆಲೆ ಬಾಳುವ 32 ಗ್ರಾಂ ತೂಕದ ಬಂಗಾರದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

ಕೋಲಾರ ನಿವಾಸಿಯಾದ ಶಿರೀಷ ಎನ್ (24) ಅವರು, ಆಗಸ್ಟ್ ೨೦ರಂದು ಸ್ನೇಹಿತೆಯಾದ ಹರ್ಷಿತರವರ ಮದುವೆಗೆ ದಾವಣಗೆರೆ ಶಾಮನೂರು ರಸ್ತೆಯಲ್ಲಿರುವ ಬಾಪೂಜಿ ಬ್ಯಾಕ್ ಸಮುದಾಯ ಭವನಕ್ಕೆ ತೆರಳಿದ್ದರು. ಆಗ ರೂಮಿನಲ್ಲಿ ಬ್ಯಾಗ್ ಇಟ್ಟು ಮದುವೆ ಕಾರ್ಯಕ್ರಮದಲ್ಲಿರುವಾಗ ಕಳ್ಳರು ಬ್ಯಾಗಿನಲ್ಲಿದ್ದ ಅಂದಾಜು 1,30,000 ರೂ. ಬೆಲೆ ಬಾಳುವ 25ಗ್ರಾಂ ತೂಕದ ಡಾಲರ್ ಇರುವ ಬಂಗಾರದ ಚೈನ್, ನನ್ನ ಸ್ನೇಹಿತೆ ಅಂಕಿತ ಇವರ 18000 ರೂ. ಬೆಲೆ ಬಾಳುವ 03 ಗ್ರಾಂ ಬಂಗಾರದ ಓಲೆ, ನನ್ನ ಸ್ನೇಹಿತೆ ಸ್ವಾತಿ ಇವರ 18000 ರೂ. ಬೆಲೆ ಬಾಳುವ 03 ಗ್ರಾಂ ಬಂಗಾರದ ಓಲೆ ಕಳುವಾಗಿದ್ದು, ಈ ಬಗ್ಗೆ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

pratima murder; ಚಾಲಕ ಕಿರಣ್ ನನ್ನುಕೆಲಸದಿಂದ ತೆಗೆದಿದ್ದೇ ಪ್ರತಿಮಾ ಅವ್ರಿಗೆ ಮುಳುವಾಯಿತೇ?

ಆರೋಪಿಗಳನ್ನು ಪತ್ತೆ ಮಾಡಲು ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ವಿಜಯಕುಮಾರ್ ಎಂ ಸಂತೋಷ್ ಹಾಗೂ ನಗರ ಉಪ ವಿಭಾಗದ ಡಿವೈಎಸ್ ಪಿ.ಮಲ್ಲೇಶ್ ದೊಡ್ಡಮನಿ ರವರುಗಳ ಮಾರ್ಗದರ್ಶನದಲ್ಲಿ, ವಿದ್ಯಾನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಪ್ರಭಾವತಿ.ಸಿ.ಶೇತ ಸನದಿ ರವರ ನೇತೃತ್ವದಲ್ಲಿ ವಿದ್ಯಾನಗರ ಪೊಲೀಸ್ ಠಾಣೆ ಸಿಬ್ಬಂದಿಯನ್ನೊಳಗೊಂಡ ತಂಡ ಕಾರ್ಯಾಚರಣೆ ನಡೆಸಿತ್ತು.

ಆರೋಪಿಯನ್ನು ಪತ್ತೆ ಮಾಡಿದ ದಾವಣಗೆರೆ ನಗರ ಉಪ ವಿಭಾಗದ ಡಿವೈಎಸ್ ಪಿ ಮಲ್ಲೇಶ್ ದೊಡ್ಡಮನಿ ರವರ ಮಾರ್ಗದರ್ಶನದಲ್ಲಿ ತನಿಖಾಧಿಕಾರಿ ಪ್ರಭಾವತಿ.ಸಿ.ಶೇತಸನದಿ ಪೊಲೀಸ್ ಇನ್ಸ್ಪೆಕ್ಟರ್ ವಿದ್ಯಾನಗರ ಠಾಣೆ, ವಿಜಯ್ ಎಂ. ಪಿ.ಎಸ್.ಐ ರೇಣುಕಾ ಜಿ.ಎಂ ಪಿ.ಎಸ್.ಐ ಹಾಗೂ ಸಿಬ್ಬಂದಿಗಳಾದ ಆನಂದ ಮುಂದಲಮನಿ, ಯೋಗೀಶ್ ನಾಯ್ಕ, ಭೋಜಪ್ಪ ಕಿಚಡಿ, ಮಂಜಪ್ಪ.ಟಿ, ಗೋಪಿನಾಥ ಬಿ ನಾಯ್ಕ, ಲಕ್ಷ್ಮಣ್ ಆರ್ ಹಾಗೂ ಠಾಣಾ ಸಿಬ್ಬಂದಿಗಳಿಗೆ ಪೊಲೀಸ್ ಅಧೀಕ್ಷಕರವರಾದ ಉಮಾ ಪ್ರಶಾಂತ್ ಐ.ಪಿ.ಎಸ್ ರವರು ಶ್ಲಾಘಿಸಿದ್ದಾರೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!