ಕ್ರೈಂ ಸುದ್ದಿ

theft; ಮನೆಕಳ್ಳತನ ಆರೋಪಿತರ ಬಂಧನ; ಸ್ವತ್ತು ವಶ

ದಾವಣಗೆರೆ, ಆ.23: ಹರಿಹರ ತಾಲ್ಲೂಕಿನ ನಂದಿತಾವರೆ ಗ್ರಾಮದಲ್ಲಿ ಕಳ್ಳತನ (theft) ನಡೆಸಿದ್ದ ಕದೀಮರನ್ನು ಮಲೇಬೆನ್ನೂರು ಪೊಲೀಸ್ ಠಾಣೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ನಾಗಮ್ಮ ಎಂಬುವವರ ಮನೆಯಲ್ಲಿ ಆ.11ರಂದು ಕಳ್ಳತನ ನಡೆದ್ದು, ಮನೆಯಲ್ಲಿದ್ದ 10,000 ರೂ. ನಗದು 2,16,000 ರೂ. ಬೆಲೆಯ ಬೆಳ್ಳಿ-ಬಂಗಾರದ ಆಭರಣಗಳನ್ನು ಅಪಹರಿಸಿದ್ದರು.

police; ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ; ಪೊಲೀಸ್ ವರಿಷ್ಟಾಧಿಕಾರಿ ಡಾ. ಅರುಣ್ ಕೆ. ವರ್ಗಾವಣೆ

ಆರೋಪಿತರನ್ನು ಮಹಮ್ಮದ ಕರೀಂ (22), ಮಹಮ್ಮದ್ ಶಬಾಜ್ (21) ತಬ್ರೇಜ್ ಅಹಮ್ಮದ್ (36) ಗುರುತಿಸಲಾಗಿದೆ.

ಹೆಚ್ಚುವರಿ ಪೊಲೀಸ್ ಅಧೀಕ್ಷಕ ಆರ್.ಬಿ.ಬಸರಗಿ ಹಾಗೂ ದಾವಣಗೆರೆ ಗ್ರಾಮಾಂತರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಬಸವರಾಜ ಬಿ.ಎಸ್ ರವರ ಮಾರ್ಗದರ್ಶನದಲ್ಲಿ ಹರಿಹರ ವೃತ್ತ ನಿರೀಕ್ಷಕ ಸುರೇಶ ಸಗರಿ ಹಾಗೂ ಸಿಬ್ಬಂದಿಗಳನ್ನೊಳಗೊಂಡ ಪೊಲೀಸ್ ತಂಡ ಆರೋಪಿತರನ್ನು ಬಂಧಿಸಿ ಒಟ್ಟು 38 ಗ್ರಾಂ ತೂಕದ ಸುಮಾರು 1.90,000 ಬೆಲೆ ಬಾಳುವ ಬಂಗಾರದ ಆಭರಣಗಳು, 3000 ರೂ. ಬೆಲೆ ಬಾಳುವ ಬೆಳ್ಳಿಯ ಉಡುದಾರ ಮತ್ತು ಕೃತ್ಯಕ್ಕೆ ಉಪಯೋಗಿಸಿದ 2 ಆಟೋಗಳು, 2 ಮೊಬೈಲ್ ಗಳು ಹಾಗೂ ಕಬ್ಬಿಣದ ರಾಡನ್ನು ವಶಕ್ಕೆ ತೆಗೆದುಕೊಂಡಿದ್ದು, ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Click to comment

Leave a Reply

Your email address will not be published. Required fields are marked *

Most Popular

To Top