jail compound; ದಾವಣಗೆರೆ ಜೈಲಿನ ಕಾಂಪೌಂಡ್ ಜಿಗಿದು ಖೈದಿ ಪರಾರಿ

ದಾವಣಗೆರೆ : jail compound ಚೌಕ ಚಿತ್ರವೊಂದರಲ್ಲಿ ಪೊಲೀಸ್ ಬಿಗಿ ಭದ್ರತೆ ಇದ್ದರೂ, ಸುರಂಗ ಮಾರ್ಗದ ಮೂಲಕ ಖೈದಿಗಳು ಹೊರ ಹೋಗುವುದನ್ನು ನಾವೆಲ್ಲ ಚಿತ್ರದಲ್ಲಿ ನೋಡಿದ್ದೇವೆ… ಆದರೆ ನೈಜ ಘಟನೆಯೊಂದರಲ್ಲಿ ಪೋಕ್ಸೊ ಕಾಯ್ದೆಯಡಿ ಬಂಧಿತನಾದ ವಿಚಾರಣಾಧೀನ ಖೈದಿಯೊಬ್ಬ ತನ್ನ ಚಾಣಾಕ್ಷತನದಿಂದ ಪೊಲೀಸರ ಬಿಗಿ ಭದ್ರತೆ ಇದ್ದರೂ ಮಣ್ಣು ಮುಕ್ಕಿಸಿ ಪರಾರಿಯಾಗಿದ್ದಾನೆ.

ದಾವಣಗೆರೆ ಬಸವನಗರ ಪೊಲೀಸ್ ಠಾಣೆ ಪಕ್ಕದಲ್ಲಿಯೇ ದಾವಣಗೆರೆ ಸಬ್ ಜೈಲಿದೆ.. ಬೃಹತ್ತಾದ ತಂತಿಯಿಂದ ಸುತ್ತಿರುವ ಕಾಂಪೌಂಡ್ ಇದೆ. ಕಾಂಪೌಂಡ್ ಮೇಲೆ ತಂತಿಗಳನ್ನು ಸುರುಳಿ ಆಕಾರದಲ್ಲಿ ಅಳವಡಿಸಿಕೊಳ್ಳಲಾಗಿದೆ.ಅಲ್ಲದೇ ಏಳು ಸುತ್ತಿನ ಕೋಟೆಗಿದ್ದ ಭದ್ರತೆ ಈ ಜೈಲಿಗಿದೆ. ಒಳಗೆ ಹೋಗಲೂ ಮೂರು ಬಾಗಿಲುಗಳನ್ನು ದಾಟಿ ಹೋಗಬೇಕು… ಸುತ್ತಲೂ ಸೈನಿಕರಂತೆ ಪೊಲೀಸರು ಇದ್ದಾರೆ. ಇಂತಹ ಭದ್ರತೆ ನಡುವೆ ವಿಚಾರಣಾಧೀನ ಖೈದಿಯೊಬ್ಬ ಖಾಕಿ ಪಡೆಗೆ ಚಳ್ಳೆ ಹಣ್ಣು ತಿನ್ನಿಸಿದ್ದಾನೆ.

ಇದನ್ನೂ ಓದಿ:-  bsy; ಬಿಎಸ್ ವೈ ನಾಯಕತ್ವವಿದ್ದರೆ ಮಾತ್ರ ಬಿಜೆಪಿಗೆ ಭವಿಷ್ಯ: ರೇಣುಕಾಚಾರ್ಯ

ಪೋಕ್ಸೊ ಕೇಸ್ ನಲ್ಲಿ ವ್ಯಕ್ತಿಯೊಬ್ಬ ಎರಡು ದಿನಗಳ ಹಿಂದೆ ದಾವಣಗೆರೆ ಜೈಲು ಸೇರಿದ್ದ.‌.. ಆದರೆ ಎರಡೇ ದಿನದಲ್ಲಿ ಪೊಲೀಸರ ಕೋಟೆ ಭೇದಿಸಿ ಜೈಲಿನ ಒಳಗಡೆಯ ತೆಂಗಿನ ಮರ ಹತ್ತಿ ಅಲ್ಲಿಂದ ಕಾಂಪೌಂಡ್ ಮೇಲಿಂದ ಜಿಗಿದು ಜೈಲಿಂದ ಹೊರ ನಡೆದಿದ್ದಾನೆ.

ಈತನ ಹೆಸರು ವಸಂತ್ (23) ದಾವಣಗೆರೆಯ ಕರೂರಿನ ಆಟೋ ಚಾಲಕ ಎಂದು ಹೇಳಲಾಗಿದೆ. ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ದಾವಣಗೆರೆ ಮಹಿಳಾ ಠಾಣೆಯ ಪೊಲೀಸರು ಈತನನ್ನು ದಸ್ತಗಿರಿ ಮಾಡಿ ಜೈಲಿಗೆ ಕಳುಹಿಸಿದ್ದರು.. ಆದರೆ ಈ ವಿಚಾರಣಾಧೀನ ಖೈದಿ ಜೈಲಿನ ಗಡಿ ದಾಟಿದ್ದು, ಹೊರ ನಡೆದಿದ್ದು ಹೇಗೆ ಎಂಬ ಪ್ರಶ್ನೆಗೆ ಉತ್ತರ ಸಿಗಬೇಕಿದೆ.

ಈ ದಾವಣಗೆರೆ ಜೈಲಿನಲ್ಲಿ ಆಗಾಗ ಇಂತಹ ಪ್ರಕರಣಗಳು ನಡೆಯುತ್ತಿರುತ್ತವೆ..ಆದರೂ ಕೂಡ ಇಲ್ಲಿಯ ಜೈಲಿನ ಪೊಲೀಸರು ಎಚ್ಚೆತ್ತುಕೊಂಡಿಲ್ಲ. 2018ರಲ್ಲಿ ಜೈಲಿನಲ್ಲಿದ್ದ ವಿಚಾರಣಾಧೀನ ಕೈದಿಯೊಬ್ಬ ತೆಂಗಿನ ಮರದಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದು, ತೀವ್ರ ಗಾಯಗೊಂಡು ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿದ್ದ. ನಿಂಗರಾಜ್ ಗಾಯಗೊಂಡ ವಿಚಾರಣಾಧೀನ ಕೈದಿ‌. ಈತ ತೀವ್ರ ಖಿನ್ನತೆಯಿಂದ ಬಳಲುತ್ತಿದ್ದ. ನಿಂಗರಾಜ್ ಕೊಲೆ ಪ್ರಕರಣದಲ್ಲಿ ಬಂಧಿತನಾಗಿದ್ದು, ವಿಚಾರಣೆಗಾಗಿ ಜೈಲಿನಲ್ಲಿ ಇಡಲಾಗಿತ್ತು.

ಟ್ರೇಂಡ್ಸ್ ಅಂಗಡಿಯಲ್ಲಿಯೂ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿದ್ದ ಕಳ್ಳ : ದಾವಣಗೆರೆ ನಗರದ ಪಿಬಿ ರಸ್ತೆಯಲ್ಲಿನ ಟ್ರೇಂಡ್ಸ್ ಅಂಗಡಿಯಲ್ಲಿ ಕಳ್ಳನೊಬ್ಬ ನಿಷ್ಕರ್ಷ ಚಿತ್ರವೊಂದರಲ್ಲಿ ಡಕ್ ನಲ್ಲಿ ಹೋದ ಹಾಗೆ ಅಂಗಡಿಯ ಡಕ್ ನಲ್ಲಿ ಹೋಗಿ ಅಂಗಡಿಗೆ ಕಳ್ಳ ನುಗ್ಗಿದ್ದ..ಪೊಲೀಸರು ಸಹ ಕಳ್ಳ ಅಂಗಡಿಯಲ್ಲಿ ಇದ್ದಾನೋ , ಇಲ್ಲವೋ ಎಂದು ಟಾರ್ಚ್ ಹಾಕಿ ಮೂರು ದಿವಸ ಹುಡುಕಿದ್ದರು‌. ಆದರೆ ಕಳ್ಳ ಮಾತ್ರ ಪೊಲೀಸರಿಗೆ ಸಿಗಲೇ ಇಲ್ಲ‌‌.‌‌‌..ಅಲ್ಲಿಯೂ ಸಹ ಕಳ್ಳ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ಎಸ್ಕೇಪ್ ಆಗಿದ್ದ.

ಇನ್ನು ನೂತನ ಎಸ್ಪಿ ಉಮಾ ಪ್ರಶಾಂತ್ ಅಧಿಕಾರ ಸ್ವೀಕರಿಸಿ ಒಂದೇ ದಿನದಲ್ಲಿ ಈ ಘಟನೆ ನಡೆದಿದ್ದು, ಘಟನಾ ಸಂಬಂಧ ತನಿಕೆ ನಡೆಯುತ್ತಿದೆ ಎಂದು ಎಸ್ಪಿ ಉಮಾ ಪ್ರಶಾಂತ್ ತಿಳಿಸಿದ್ದಾರೆ..

ಒಟ್ಟಾರೆ ಇಂತಹ ಸಣ್ಣ ಜೈಲಿನಲ್ಲಿ ವಿಚಾರಣಾ ಖೈದಿಗಳು ಪೊಲೀಸರ ಗಡಿ ದಾಟಿ ತಪ್ಪಿಸಿಕೊಂಡಿದ್ದಾರೂ ಹೇಗೆ ಎಂಬುದು ಮಾತ್ರ ಯಕ್ಷ ಪ್ರಶ್ನೆ.

Note:- These story consists copyright

Leave a Reply

Your email address will not be published. Required fields are marked *

error: Content is protected !!