ವಂದೇ ಭಾರತ್ ರೈಲಿಗೆ ಕಲ್ಲೇಟು ಓರ್ವ ಬಾಲಕ ವಶಕ್ಕೆ: ಎಸ್ ಪಿ ಡಾ.ಅರುಣ್ ಸ್ಪಷ್ಟನೆ

ದಾವಣಗೆರೆ : ವಂದೇ ಭಾರತ್ ರೈಲಿಗೆ ಕಲ್ಲು ಎಸೆದ ಪ್ರಕರಣಕ್ಕೆ ಸಂಬಂದಿಸಿದಂತೆ ಓರ್ವ ಬಾಲಕ ಹಾಗೂ ಮೂರು ತಿಂಗಳ ಹಿಂದಿನ ಪ್ರಕರಣದಲ್ಲಿ ಓರ್ವ ಸೇರಿದಂತೆ ಎರಡು ಪ್ರತ್ಯೇಕ ಪ್ರಕರಣದಲ್ಲಿ ಇಬ್ಬರನ್ನ ವಶಕ್ಕೆ ಪಡೆಯಲಾಗಿದೆ ಎಂದು ದಾವಣಗೆರೆ ಎಸ್ ಪಿ ಡಾ. ಕೆ ಅರುಣ್ ಸ್ಪಷ್ಟನೆ ನೀಡಿದ್ದಾರೆ.
ದಾವಣಗೆರೆ ನಗರದ ದ ವಿಜಯನಗರ ಬಡಾವಣೆಯಿಂದ ಒಬ್ಬ ಬಾಲಾಪರಾದಿ ಹಾಗೂ ಮೂರು ತಿಂಗಳ ಹಿಂದೆ ನಡೆದ ಪ್ರತ್ಯೇಕ ಪ್ರಕರಣದಲ್ಲಿ ಭಾಷಾನಗರದ ಮತ್ತೊಬ್ಬ ಬಾಲಾಪರಾದಿಯನ್ನು ವಶಕ್ಕೆ ಪಡೆಯಲಾಗಿದೆ.
ಈ ಬಗ್ಗೆ ದಾವಣಗೆರೆ ಆರ್‌ಪಿಎಫ್ ಟ್ವಿಟ್ ಮಾಡಿರುವುದನ್ನು ಉಲ್ಲೇಖಿಸಿ ಎಸ್ಪಿ ಅರುಣ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.