ಕೃತ್ಯ ನಡೆದ 24 ಗಂಟೆಯೊಳಗೆ , ಹೈವೇ ರಾಬರಿ ಪ್ರಕರಣದ  ಆರೋಪಿತರ  ಪತ್ತೆ : ಡಾ. ಕೆ. ಅರುಣ್ ಐಪಿಎಸ್ ಶ್ಲಾಘನೆ

ಕೃತ್ಯ ನಡೆದ 24 ಗಂಟೆಯೊಳಗೆ , ಹೈವೇ ರಾಬರಿ ಪ್ರಕರಣದ  ಆರೋಪಿತರ  ಪತ್ತೆ : ಡಾ. ಕೆ. ಅರುಣ್ ಐಪಿಎಸ್ ಶ್ಲಾಘನೆ

ದಾವಣಗೆರೆ :  ಕೃತ್ಯ ನಡೆದ 24 ಗಂಟೆಯೊಳಗೆ , ಹೈವೇ ರಾಬರಿ ಪ್ರಕರಣದ  ಆರೋಪಿತರ  ಪತ್ತೆ ಮಾಡಿ ಅವರಿಂದ , ಸುಲಿಗೆ ಮಾಡಿದ 65,000/- ರೂ ಮೌಲ್ಯದ 03 ಮೊಬೈಲ್ ಗಳು, 1650/- ರೂ ನಗದು ಹಣ ಮತ್ತು ಕೃತಕ ಬಳಸಿದ 80,000/- ರೂ ಮೌಲ್ಯದ ಡಿಯೋ ಸ್ಕೂಟರ್ ಜಪ್ತಿ ಮಾಡಿದ ದಾವಣಗೆರೆಯ ಗ್ರಾಮಾಂತರ ಪೋಲೀಸ್ ತಂಡ ಪ್ರಶಂಸೆಗೆ ಪಾತ್ರವಾಗಿದೆ.

ದಿನಾಂಕ: 12-07-2023 ರಂದು ದಾವಣಗೆರೆ ಗ್ರಾಮಾಂತರ ಪೊಲೀಸ್‌ ಠಾಣಾ ಗುನ್ನೆ ನಂ:228/2023, ಕಲಂ: 392 ಐಪಿಸಿ | ಕೇಸಿನಲ್ಲಿ ದಿನಾಂಕ:12-07-2023 ರಂದು ಪಿರ್ಯಾದಿ ಮಾರುತಿ ತಂದೆ ಕೃಷ್ಣಪ್ಪ ಇವರು ಠಾಣೆಗೆ ಹಾಜರಾಗಿ ನೀಡಿದ ದೂರಿನಾಂಶ ಏನೆಂದರೆ, ಪಿರ್ಯಾದಿ ರವರು ಸರಕು ತುಂಬಿದ ಲಾರಿಯನ್ನು ಬೆಳಗಾವಿಯಿಂದ ಬೆಂಗಳೂರಿಗೆ ಚಲಾಯಿಸಿಕೊಂಡು ಪುಣೆ ಬೆಂಗಳೂರು ಮಾರ್ಗವಾಗಿ ಹೋಗುತ್ತಿದ್ದಾಗ ದಿನಾಂಕ: 12/07/2023 ರಂದು ಮಧ್ಯರಾತ್ರಿ 01-00  ಗಂಟೆ ಸಮಯದಲ್ಲಿ ಹಳೇ ಬಾತಿ ಹತ್ತಿರ ಹೈ ವೇ ರಸ್ತೆಯಲ್ಲಿ  ಟೈರ್ ಪಂಚರ್ ಆಗಿರುವ ಲಾರಿಯನ್ನು ನಿಲ್ಲಿಸಿಕೊಂಡು ನಿಂತಿರುವಾಗ್ಗ ಡಿಯೋ ಸ್ಕೂಟರ್ ನಲ್ಲಿ ಬಂದ 03 ಜನರು ಪಿರ್ಯಾದಿಯವರಿಗೆ ಚಾಕು ತೋರಿಸಿ ಹೆದರಿಸಿ ಪಿರ್ಯಾದಿಯವರ ಬಳಿ ಇದ್ದ 2500/- ರೂ ನಗದು ಹಣ, ಹಾಗೂ 25,000/- ರೂ ಬೆಲೆಯ ವಿವೋ ಮೊಬೈಲ್ ನ್ನು ಕಿತ್ತುಕೊಂಡು ಹೋಗಿದ್ದು ಗುನ್ನೆ ನಂ-228/2023, ಕಲಂ:392 ಐಪಿಸಿ  ರೀತ್ಯಾ ಪ್ರಕರಣ ದಾಖಲಾಗಿರುತ್ತದೆ.

ನಂತರ ಅಪರ ಪೊಲೀಸ್ ಅಧೀಕ್ಷಕರಾದ  ಶ್ರೀ ಆರ್.ಬಿ ಬಸರಗಿ ರವರ ಹಾಗೂ ದಾವಣಗೆರೆ ಗ್ರಾಮಾಂತರ ಉಪ-ವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕರವರಾದ  ಶ್ರೀಮತಿ ಕನ್ನಿಕಾ ಸಿಕ್ರಿವಾಲ್ ಇವರ ಮಾರ್ಗದರ್ಶನದಲ್ಲಿ ಗ್ರಾಮಾಂತರ ಠಾಣೆಯ ಪಿ ಐ  ಶ್ರೀ ಲಿಂಗನಗೌಡ ನೆಗಳೂರ ಇವರು ಪಿಎಸ್ ಐ ಶ್ರೀ ಎ.ಆರ್ ಮುಂದಿನ ಮನಿ ಮತ್ತು ಸಿಬ್ಬಂದಿ ದೇವೇಂದ್ರ ನಾಯ್ಕ, ಅಣ್ಣಯ್ಯ, ಮಹಮ್ಮದ್ ಯೂಸುಫ್, ವೀರೇಶ್, ಮಂಜನಾಯ್ಕ, ಅನಿತಾಬಾಯಿ ಕೆ.ಆರ್ ಮತ್ತು ಜೀಪ್ ಚಾಲಕ ಅಜ್ಜಯ್ಯ ಇವರೊಂದಿಗೆ  ಪ್ರಕರಣ ದಾಖಲಾಗಿ 24 ಗಂಟೆಗಳಲ್ಲಿ ಪ್ರಕರಣದ ಆರೋಪಿತ  ಶರತ್ ಕುಮಾರ್,( 20 ) ಪೇಂಟ್ ಕೆಲಸಗಾರನಾಗಿದ್ದು, , ದಾವಣಗೆರೆ ಯ ಬೂದಾಳ್ ರಸ್ತೆ ನಿವಾಸಿ, ಹಾಗೂ ಇಬ್ಬರು ಕಾನೂನು ಸಂಘರ್ಷಕ್ಕೊಳಗಾದ ಬಾಲಕರನ್ನು ವಶಕ್ಕೆ ಪಡೆದು, ಇವರಿಂದ ಸುಲಿಗೆ ಮಾಡಿದ್ದ 65,000/- ರೂ ಬೆಲೆಯ 03 ಮೊಬೈಲ್ ಫೋನ್, 1650/- ರೂ ನಗದು ಹಣ, ಕೃತ್ಯಕ್ಕೆ ಬಳಸಿದ ಡಿಯೋ ಬೈಕ್‌ ನ್ನು ಜಪ್ತಿ ಮಾಡಲಾಗಿದ್ದು,  ಆರೋಪಿತರನ್ನು ಘನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿರುತ್ತದೆ  ಹಾಗೂ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕರನ್ನು ಬಾಲ ಮಂದಿರಕ್ಕೆ ಬಿಡಲಾಗಿರುತ್ತದೆ.

ಸದರಿ ಆರೋಪಿತರನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾದ  ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಮಾನ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರಾದ  ಶ್ರೀ ಡಾ.ಕೆ. ಅರುಣ್, ಐಪಿಎಸ್, ರವರು  ಶ್ಲಾಘಿಸಿರುತ್ತಾರೆ.

Leave a Reply

Your email address will not be published. Required fields are marked *

error: Content is protected !!