ಕೃಷಿ

ಕೃಷಿ ಕಾಯ್ದೆ ವಾಪಾಸ್ ಪಡೆಯಲು ಕೋಡಿಹಳ್ಳಿ ಚಂದ್ರಶೇಖರ್ ಆಗ್ರಹ

ಕೃಷಿ ಕಾಯ್ದೆ ವಾಪಾಸ್ ಪಡೆಯಲು ಕೋಡಿಹಳ್ಳಿ ಚಂದ್ರಶೇಖರ್ ಆಗ್ರಹ

ದಾವಣಗೆರೆ : ಕೃಷಿ ಕಾಯ್ದೆ ಹಾಗೂ ಭೂಸುಧಾರಣಾ ಕಾಯ್ದೆ ಅತ್ಯಂತ ಅಪಾಯಕಾರಿ ಅದನ್ನು ವಾಪಾಸ್ ಪಡೆಯಲು ಸಿಎಂ ಸಿದ್ದರಾಮಯ್ಯ ನವರು ಏಕೆ ಸಧನದಲ್ಲಿ ಮುಂದಾಗಲಿಲ್ಲ ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಪ್ರಶ್ನಿಸಿದ್ದಾರೆ.

ಜಿಲ್ಲಾ ವರದಿಗಾರರ ಕೂಟದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಯ್ದೆ ರದ್ದು ಪಡಿಸಲು ಈಗಾಗಲೇ ನಾನು ಸಿಎಂ ಸಿದ್ದರಾಮಯ್ಯ ನವರಿಗೆ ಭೇಟಿಯಾಗಿ ಮನವಿ ಮಾಡಿದ್ದೇನೆ. ಇದನ್ನು ತಕ್ಷಣ ವಾಪಾಸ್ ತೆಗೆಯಬೇಕೆಂದು ಬೇಡಿಕೆ ಇಟ್ಟಿದ್ದೇವು ಎಂದರು.

1961 ಭೂಸುಧಾರಣಾ ಕಾಯ್ದೆ ಏನಿದೆ ಇದಕ್ಕೆ ವಿಚಾರಗಳನ್ನು ನಿಬಂಧನೆಗಳನ್ನು ಇಟ್ಟು ಅಂದು ಮುಂದುವರೆಸಿದ್ದರು, ಇದನ್ನು ವಾಪಾಸ್ ಪಡೆಯಲು ಸಿದ್ದರಾಮಯ್ಯ ನವರು ಪ್ರಯತ್ನ ಪಡಬೇಕು. ಇದು ವ್ಯಾಪಾರಿಕರಣ ಆಗಬಾರದು, ಕೃಷಿ ಭೂಮಿ ಕೃಷಿ ಭೂಮಿಯಾಗಿಯೇ ಇರಬೇಕು., ಇದನ್ನು ಸಿದ್ದರಾಮಯ್ಯ ನವರು ತುರ್ತಾಗಿ ಕಾಯ್ದೆಗಳನ್ನು ರದ್ದು ಮಾಡಿ ಆದೇಶ ಹೊರಡಿಸುತ್ತಾರೆಂಬ ನಂಬಿದ್ದೇವೆ ಎಂದರು.

Click to comment

Leave a Reply

Your email address will not be published. Required fields are marked *

Most Popular

To Top