Maize : ಮೆಕ್ಕೆಜೋಳ ಬೆಳೆಯಲ್ಲಿ ಕಳೆ ನಿವಾರಣೆಗೆ ರೈತರಿಗೆ ಸಲಹೆ

ಮೆಕ್ಕೆಜೋಳ ಬೆಳೆಯಲ್ಲಿ ಕಳೆ ನಿವಾರಣೆಗೆ ರೈತರಿಗೆ ಸಲಹೆ
  1. ಮುಳ್ಳು ಸಜ್ಜೆಯನ್ನು ಹತೋಟಿಯಲ್ಲಿಡಲು ಬಿತ್ತನೆ ಮಾಡಿದ 3 ದಿನಗಳೊಳಗೆ ಅಟ್ರಾಜನ್ ಶೇ.50 ಡಬ್ಲೂ.ಪಿ ಕಳೆ ನಾಶಕವನ್ನು ಎಕರೆಗೆ 500 ಗ್ರಾಂ . ಮರಳಲ್ಲಿ ಮಿಶ್ರಣ ಮಾಡಿ ಭೂಮಿಗೆ ಹಾಕಬೇಕು. ಇದರಿಂದಾಗಿ 15 ದಿನಗಳ ವರೆಗೆ ಜಮೀನಿನಲ್ಲಿ ಯಾವುದೇ ಕಳೆ ಬೆಳೆಯದಂತೆ ತಡೆಯುತ್ತದೆ.
  2. ಬಿತ್ತಿದ 20 ದಿನಗಳ ನಂತರ ಟೆಂಬೋ ಪ್ರೈಯಾನ್ ಶೇ.42 ಎಸ್ ಸಿ ಅನ್ನು 2 ಮಿಲಿ ಪ್ರತಿ ಲೀಟರ್ ನೀರಿಗೆ ಹಾಕಿ ಸಿಂಪಡಿಸುವುದರಿಂದ 45 ರಿಂದ 50 ದಿನಗಳೊಳಗಾಗಿ ಅಂತರ್ ಬೇಸಾಯ ಮಾಡುವುದರಿಂದ ಹಾಗೂ ಬೆಳೆ ಪರಿವರ್ತನೆಯಿಂದ ಕಳೆಗಳ ಸಮಗ್ರ ನಿಯಂತ್ರಣ ಮಾಡಬಹುದಾಗಿದೆ.
  1. ಆನಗೋಡು ಹಾಗೂ ಮಾಯಕೊಂಡ ಹೋಬಳಿಯಲ್ಲಿ ಮೋಡ ಕವಿದ ವಾತಾವರಣವಿದ್ದು ವ್ಯಾಪಕ ಮಳೆಯಾಗುತ್ತಿರುವುದರಿಂದ ಮೆಕ್ಕೆಜೋಳ ಬೆಳೆಯು ಚೇತರಿಸಿಕೊಳ್ಳಲು ರೈತ ಸಂಪರ್ಕ ಕೇಂದ್ರದಲ್ಲಿ ರಿಯಾಯಿತಿ ದರದಲ್ಲಿ ಲಭ್ಯವಿರುವ ಲಘು ಪೋಷಕಾಂಶ ಮಿಶ್ರಣವನ್ನು 2 ಗ್ರಾಂ ಪ್ರತಿ ಲೀಟರ್ ನೀರಿನೊಂದಿಗೆ ಸಿಂಪಡಿಸುವುದು.
  1. ಮೆಕ್ಕೆಜೋಳ ಬೆಳೆಯಲ್ಲಿ ಲದ್ದಿಹುಳು ಕಂಡುಬಂದಲ್ಲಿಆರಂಭಿಕ ಹಂತಗಳಲ್ಲಿ ಪರಿಣಾಮಕಾರಿಯಾಗಿ ನಿಯಂತ್ರಿಸಲು ರೈತ ಸಂಪರ್ಕ ಕೇಂದ್ರಗಳಲ್ಲಿ ರಿಯಾಯಿತಿ ದರದಲ್ಲಿ ಲಭ್ಯವಿರುವ ಎಮಾಮೆಕ್ಟಿನ್ ಬೆಂಜೋಯೇಟ್ ಶೇ.5 ಎಸ್.ಸಿ ಯನ್ನು 0.4 ಗ್ರಾಂ ಪ್ರತಿ ಲೀಟರ್ ನೀರಿನೊಂದಿಗೆ ಸಿಂಪಡಿಸಲು ದಾವಣಗೆರೆ ತಾಲ್ಲೂಕಿನ ಕೃಷಿ ಇಲಾಖೆ ಸಹಾಯಕ ನಿರ್ದೇಶಕರು ರೈತ ಬಾಂಧವರಿಗೆ ಸಲಹೆ ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!