ಹೊನ್ನಾಳಿಯಲ್ಲಿ ನಡೆದ ಕೊಲೆ ಪ್ರಕರಣ ನಾಲ್ವರ ಬಂಧನ; ಎಸ್ಪಿ ರಿಷ್ಯಂತ್
ದಾವಣಗೆರೆ: ಹೊನ್ನಾಳಿಯಲ್ಲಿ ಶಿವಮೊಗ್ಗದ ರೌಡಿಶೀಟರ್ ಹಂದಿ ಅಣ್ಣಿ ಕೊಲೆ ಆರೋಪಿಗಳ ಬರ್ಭರ ಹತ್ಯೆ ಮಾಡಿದ್ದ ತಂಡದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಎಸ್ಪಿ ಸಿ.ಬಿ. ರಿಷ್ಯಂತ್ ಹೇಳಿದ್ದಾರೆ.
ನಗರದ ಸ್ಮಾರ್ಟ್ ಸಿಟಿ ಕಚೇರಿಯಲ್ಲಿಂದು ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಸುನಿಲ್, ವೆಂಕಟೇಶ್, ಅಭಿಲಾಶ್, ಪವನ್ ಬಂಧಿತರಾಗಿದ್ದಾರೆ ಎಂದು ಹೇಳಿದರು.
ಬಂಧಿತರು ತಾವಾಗಿಯೇ ಶರಣಾಗಿದ್ದಾರೋ ಅಥವಾ ಪೊಲೀಸರೇ ಬಂಧಿಸಿದ್ದಾರೋ ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರ ದೊರೆತಿಲ್ಲ. ಆದರೆ ನಾಲ್ವರೂ ಶಿಗ್ಗಾವಿ ಪೊಲೀಸರ ಮುಂದೆ ಶರಣಾಗತರಾಗಿದ್ದಾರೆ ಎನ್ನಲಾಗಿದೆ.
ಹಲ್ಲೆಯಲ್ಲಿ ಮೃತಪಟ್ಟ ಅಂಜನಿ ಹಾಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಧು ಇಬ್ಬರೂ ಹರಿಹರ ತಾಲ್ಲೂಕು ಭಾನುವಳ್ಳಿಯವರು ಎಂದು ಎಸ್ಪಿ ತಿಳಿಸಿದ್ದಾರೆ.
ಬುಧವಾರ ಶಿವಮೊಗ್ಗದ ರೌಡಿಶೀಟರ್ ಹಂದಿಅಣ್ಣಿ ಕೊಲೆ ಆರೋಪಿಗಳ ಬರ್ಭರ ಹತ್ಯೆ ಹೊನ್ನಾಳಿ ತಾಲ್ಲೂಕು ಚೀಲೂರು ಗ್ರಾಮದ ಬಳಿ ನಡೆದಿತ್ತು.
ಹಲ್ಲೆಯಲ್ಲಿ ಅಂಜನೇಯ ಬರ್ಭರ ಹತ್ಯೆಯಾದರೆ ಮಧು ಗಂಭೀರವಾಗಿ ಗಾಯಗೊಂಡಿದ್ದ. ಬೈಕ್ ಗೆ ಸ್ಕಾರ್ಪಿಯೋ ದಿಂದ ಡಿಕ್ಕಿ ಹೊಡೆದು ಲಾಂಗ್ ನಿಂದ ಹಲ್ಲೆ ಮಾಡಲಾಗಿತ್ತು. ಕಾರು ರಿವರ್ಸ್ ತೆಗೆಯಲು ಸಾಧ್ಯವಾಗದ ಹಿನ್ನಲೆಯಲ್ಲಿ ಹಲ್ಲೆ ಮಾಡಿದವರು ಕೆಎಸ್ಆರ್ಟಿಸಿ ಬಸ್ ನಲ್ಲಿ ಶಿಗ್ಗಾವ್ ಗೆ ತೆರಳಿದ್ದರು .ಆರೋಪಿಗಳು ಹಂದಿ ಅಣ್ಣಿ ಕಡೆಯವರು ಎನ್ನಲಾಗುತ್ತಿದೆ.