Arecanut Special : ಜೈ ಕಿಸಾನ್ ಅಡಿಕೆ ಸ್ಪೆಷಲ್ ಉತ್ಪನ್ನ ಲೋಕಾರ್ಪಣೆ

ಜೈ ಕಿಸಾನ್ ಅಡಿಕೆ ಸ್ಪೆಷಲ್ ಉತ್ಪನ್ನ ಲೋಕಾರ್ಪಣೆ
ದಾವಣಗೆರೆ : ಜುವಾರಿ ಫಾರ್ಮ್ ಹಬ್ ಲಿಮಿಟೆಡ್ ವತಿಯಿಂದ  ಅಕ್ಯುಟೆಕ್ ಆಗ್ರೋ ಪ್ರೈ.ಲಿ. ಆವರಣದಲ್ಲಿ ಮಂಗಳವಾರ ಅಡಿಕೆ ಬೆಲೆಯಲ್ಲಿ ಉಪಯೋಗಿಸಬಹುದಾದ ಜೈ ಕಿಸಾನ್ ಅಡಿಕೆ ಸ್ಪೆಷಲ್ ಉತ್ಪನ್ನವನ್ನು ಲೋಕಾರ್ಪಣೆಗೊಳಿಸಲಾಯಿತು.
ಜುವಾರಿ ಫಾರ್ಮ್ ಹಬ್ ಲಿಮಿಟೆಡ್ ನ ವ್ಯವಸ್ಥಾಪಕ ನಿರ್ದೇಶಕ ಮದನ ಮೋಹನ ಪಾಂಡೆ  ಜೈ ಕಿಸಾನ್ ಅಡಿಕೆ ಸ್ಪೆಷಲ್ ಉತ್ಪನ್ನವನ್ನು ಅನಾವರಣಗೊಳಿಸಿದರು. ಅಲ್ಲದೇ ಅಡಿಕೆ ಬೆಲೆಯಲ್ಲಿ ಉತ್ಪನ್ನದ ಪ್ರಾಮುಖ್ಯತೆಯನ್ನು ಅಡಿಕೆ ಬೆಳೆಗಾರರಿಗೆ ತಿಳಿಸಿಕೊಟ್ಟರು. ಚನ್ನಗಿರಿಯ ಟಿಯುಎಂಸಿಓಎಸ್ ಅಧ್ಯಕ್ಷ ಆರ್.ಎಂ. ರವಿ ಮಾತನಾಡಿ, ಜೈ ಕಿಸಾನ್ ಅಡಿಕೆ ಸ್ಪೆಷಲ್ ಇದು ಅಡಿಕೆ ಬೆಳೆಗಾರರಿಗೆ ವರದಾನವಾಗಿದ್ದು, ಅಡಿಕೆ ಬೆಳೆಗೆ ಬೇಕಾಗುವ ಎಲ್ಲ ಪೋಷಕಾಂಶಗಳನ್ನು ಸರಿಯಾದ ಪ್ರಮಾಣದಲ್ಲಿ ಮಿಶ್ರಣ ಮಾಡಿರುವ ಉನ್ನತ ಗೊಬ್ಬರ ಎಂದು ಜೈ ಕಿಸಾನ್ ಕಂಪನಿಯ ಹೊಸ ಉತ್ಪನ್ನದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.
ಜೈ ಕಿಸಾನ್ ಅಡಿಕೆ ಸ್ಪೆಷಲ್ ಉತ್ಪನ್ನ ಲೋಕಾರ್ಪಣೆ
ಶ್ರೀಧರ್ ಮೂರ್ತಿ ಎಡಿಎ, ದಾವಣಗೆರೆ ಜಿಲ್ಲಾ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಲೋಕಿಕೆರೆ ನಾಗರಾಜ್, ಜಿಲ್ಲಾ ಮತ್ತು ರಾಜ್ಯ ಕೃಷಿ ಪರಿಕರಗಳ ಮಾರಾಟ ಮಂಡಳಿಯ ಅಧ್ಯಕ್ಷರು ಮಾತನಾಡಿ, ಜೈ ಕಿಸಾನ್ ಅಡಿಕೆ ಸ್ಪೆಷಲ್ ಉತ್ತಮ ಗುಣಮಟ್ಟದ ಉತ್ಪನ್ನ ಎಂಬುದಾಗಿ ಮೆಚ್ಚುಗೆ ವ್ಯಕ್ತಪಡಿಸಿದರು.ಕಾರ್ಯಕ್ರಮದಲ್ಲಿ ಮಸೂದ್ ನದೀಮ್, ಉಮಾಶಂಕರ್, ಡಾ. ಕೆ.ಕೆ. ಸಿಂಗ್, ಅಕ್ಯುಟೆಕ್ ಆಗ್ರೋ ಪ್ರೈ.ಲಿ. ನಿರ್ದೇಶಕರು, ಜುವಾರಿ ಫಾರ್ಮ್ ಹಬ್ ಲಿಮಿಟೆಡ್ ನ ಅಧಿಕಾರಿಗಳು, ದಾವಣಗೆರೆ ಜಿಲ್ಲೆಯ ಕೃಷಿ ಪರಿಕರಗಳ ಮಾರಾಟಗಾರರು, ಅಡಿಕೆ ಬೆಳೆಗಾರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!