ಇರುವ ಬೈಕ್ ಬಳಸಿ ಜಮೀನು ಕೆಲಸ, ರೈತನ ಐಡಿಯಾಗೆ ಮೆಚ್ಚುಗೆ!

ಕೊಪ್ಪಳ: ಎತ್ತುಗಳ ಸಹಾಯದಿಂದ ಜಮೀನಿನಲ್ಲಿ ಕುಂಟೆ ಮಾಡುವುದನ್ನು ನೋಡಿದ್ದೇವೆ. ಆದ್ರೆ ಕೊಪ್ಪಳದಲ್ಲೊಬ್ಬ (Koppal) ರೈತ (Farmer) ಹೊಸ ಐಡಿಯಾ ಮಾಡಿದ್ದಾರೆ. ಬಿಸರಳ್ಳಿ ಅಬ್ಬಾಸ ಎಂಬ ರೈತ ಬೈಕ್‍ಗೆ ಹರಗುವ ಕುಂಟೆ ಕಟ್ಟಿ ಎಡೆಗಡ್ಡೆ ಹೊಡೆದಿದ್ದಾರೆ. ಇದರಿಂದ ಅವರು ಹೆಚ್ಚಿನ ಉಳಿತಾಯ ಕಂಡಿದ್ದಾರೆ.
ಬೈಕ್ ಇವರಿಗೆ ಸಾಧನ
ಒಂದು ಎಕರೆ ಭೂಮಿ ಹರಗಲು 1000 ಬೇಕಾಗುತ್ತದೆ. ಹಳೆಯ ಬೈಕ್‍ಗೆ ಕುಂಟೆ ಕಟ್ಟಿ ಹರಗುವದರಿಂದ 100 ರೂಪಾಯಿಲ್ಲಿ ಭೂಮಿ ಸ್ವಚ್ಛವಾಗುತ್ತೆ. ಅಬ್ಬಾಸ 8 ಎಕರೆಯಲ್ಲಿ ಅಲಸಂದಿ ಬಿತ್ತನೆ ಮಾಡಿದ್ದಾರೆ. ಅಲಸಂದಿ ಕಸ ತೆಗೆಯಲು ಐಡಿಯಾ ಮಾಡಿದ್ದಾರೆ.
ರೈತನ ಹೊಸ ಐಡಿಯಾ ಲಾಭದಾಯಕವಾಗಿದೆ. ಎತ್ತುಗಳು ಇಲ್ಲದ ಹಿನ್ನೆಲೆ ರೈತರ ಈ ರೀತಿ ಹೊಸ ಹೊಸ ಪ್ರಯೋಗ ಮಾಡುತ್ತಿದ್ದಾರೆ. ರೈತ ಪ್ರಯೋಗಕ್ಕೆ ಮೆಚ್ಚುಗೆ ಇತರೆ ರೈತರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.