ಪರಿಸರ ದಿನಾಚರಣೆಗೆ ಆರು ಲಕ್ಷ ಸಸಿಗಳು ಸಜ್ಜು: ರೈತರಿಗಾಗಿ ಉಪಯುಕ್ತ ಮಾಹಿತಿ

ಪರಿಸರ ದಿನಾಚರಣೆಗೆ ಆರು ಲಕ್ಷ ಸಸಿಗಳು ಸಜ್ಜು: ರೈತರಿಗಾಗಿ ಉಪಯುಕ್ತ ಮಾಹಿತಿ

ದಾವಣಗೆರೆ: ಪರಿಸರ ದಿನಾಚರಣೆ ಹಾಗೂ ಮಳೆಗಾಲ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ವನಮಹೋತ್ಸವ ನಡೆಸಲು ಸಜ್ಜಾಗಿದ್ದು, ಈ ಬಾರಿ 6,39,028 ಸಸಿಗಳನ್ನು ನೆಡಲು ಸಜ್ಜಾಗಿದ್ದು, ಈ ಬಾರಿ ಸಸಿಗಳ ಸಂಖ್ಯೆ ಕಡಿಮೆ ಇದೆ. ಈಗಾಗಲೇ ಕಾಡು ಬೆಳೆಸಿ ವನ್ಯಪ್ರಾಣಿಗಳನ್ನು ಕರೆತರಲು DNO ಜಗನ್ನಾಥ್ ನೇತೃತ್ವದ ತಂಡ ರೈತರಿಗೆ ಹಾಗೂ ಗುಡ್ಡಗಳಲ್ಲಿ ಗಿಡ ನೆಡಲು ಸಜ್ಜಾಗಿದ್ದು ಕಳೆದ ಬಾರಿ ಜಿಲ್ಲೆಯಲ್ಲಿ 13 ಲಕ್ಷ ಸಸಿಗಳನ್ನು ವಿತರಿಸಲಾಗಿತ್ತು.

ಈ ಬಾರಿ ಸಾಕಷ್ಟು ರೈತರು ಅಡಕೆ ಬೆಳೆಯಲು ಮುಂದಾದ ಕಾರಣ ಸಸಿಗಳನ್ನು ಕಡಿಮೆ ಬೆಳೆಸಲಾಗಿದೆ ಎಂಬ ಮಾತು ಕೂಡ ಇದೆ. ಈ ಸಸಿಗಳನ್ನು ರಸ್ತೆ ಬದಿ, ಶಾಲಾವರಣ, ರೈತರ ಜಮೀನು, ನೆಡುತೋಪು ಇತ್ಯಾದಿ ಕಡೆಗಳಲ್ಲಿ ನೆಟ್ಟು ಪಾಲನೆ ಮಾಡುವ ಸಂಬಂಧ ಜಿಲ್ಲೆಯ ಆರು ಸಸ್ಯಪಾಲನಾ ಕ್ಷೇತ್ರಗಳಲ್ಲಿ ಈಗಾಗಲೇ ಗಿಡಗಳು ಸನ್ನದ್ಧವಾಗಿವೆ. ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ 1,76,930 ಹಾಗೂ ಇಲಾಖಾ ಯೋಜನೆಯಡಿ 4,62,098 ಗಿಡಗಳನ್ನು ಬೆಳೆಸಲಾಗಿದೆ. ದಾವಣಗೆರೆಯ ಕೊಗ್ಗನೂರು, ಶಿರಮಗೊಂಡನಹಳ್ಳಿ ನರ್ಸರಿಯಲ್ಲಿ ಒಟ್ಟು 1,18,990, ಚನ್ನಗಿರಿ ತಾಲೂಕಿನ ಬಸವರಾಜಪುರದಲ್ಲಿ 1,07,809, ಜಗಳೂರಿನ ಸಂಗೇನಹಳ್ಳಿಯಲ್ಲಿ 1,32,990, ಹೊನ್ನಾಳಿ ತಾಲೂಕಿನ ಸುಂಕದ ಕಟ್ಟೆಯಲ್ಲಿ 1,42,899, ಹರಿಹರ ತಾಲೂಕಿನಲ್ಲಿ 1,36,340 ಸಸಿಗಳನ್ನು ಬೆಳೆಸಲಾಗಿದೆ.

ಪರಿಸರ ದಿನಾಚರಣೆಗೆ ಆರು ಲಕ್ಷ ಸಸಿಗಳು ಸಜ್ಜು: ರೈತರಿಗಾಗಿ ಉಪಯುಕ್ತ ಮಾಹಿತಿ

ಇದರಲ್ಲಿ 6-9ರ ಅಳತೆಯ 82,500, 8-9ರ ಗಾತ್ರದ 1.48 ಲಕ್ಷ ಸಸಿಗಳನ್ನು ಜೂನ್ ತಿಂಗಳಿಂದ ರೈತರಿಗೆ ವಿತರಿಸಲು ಇಲಾಖೆ ತುದಿಗಾಲಲ್ಲಿದೆ. ರೈತರಿಗೆ ಮುಖ್ಯವಾಗಿ ಮಹಾಗನಿ, ಸಾಗುವಾನಿ, ರಕ್ತಚಂದನ, ಶ್ರೀಗಂಧ, ತೇಗ, ಹೆಬ್ಬೇವು ಸೇರಿದಂತೆ ಇತರೆ ಗಿಡಗಳಿದ್ದುಘಿ, ಅರಣ್ಯ ಪ್ರದೇಶದಲ್ಲಿ ಬೆಳೆಸಲು ಬೇವು, ಆಲ, ಅರಳಿ, ಅತ್ತಿ, ಹುಣಸೆ, ಗೋಣಿ, ಹೊಳೆಮತ್ತಿ. ಸೀಮಾರೂಬ, ಹೊಂಗೆ, ನೆಲ್ಲಿ, ಇತರೆ ಕಾಡುಜಾತಿಯ ಗಿಡಗಳನ್ನು ಕೂಡ ಬೆಳೆಸಲಾಗಿದೆ.

ಅಲ್ಲದೇ ಶಾಲೆಗಳಿಗೆ ಹಣ್ಣು ಮತ್ತು ನೆರಳು ನೀಡುವ ಸಸಿಗಳನ್ನು ನೀಡಲು ಅರಣ್ಯ ಇಲಾಖೆ ಮುಂದಾಗಿದೆ. ಆದರೆ ಈ ಗಿಡ ಪಡೆಯಲು ಪಹಣಿ ದಾಖಲೆ ಬೇಕಿದೆ. 6-9 ಸೆಂ.ಮೀ. ಗಾತ್ರದ (ಪಾಲಿಥೀನ್ ಚೀಲ) ಒಂದು ಗಿಡಕ್ಕೆ 6 ರೂ., 8-9ರ ಅಳತೆಯ ಗಿಡವೊಂದಕ್ಕೆ 23 ರೂ. ದರವಿದೆ.

ಸಾರ್ವಜನಿಕರ ಬೇಡಿಕೆಯಂತೆ ನೀಡುವ ದೊಡ್ಡ ಗಾತ್ರದ ಗಿಡಗಳಿಗೆ ಉತ್ಪಾದನಾ ವೆಚ್ಚದಷ್ಟೇ ದರ ನಿಗದಿಯಾಗಿದೆ. 10-16ರ ಅಳತೆಯ ಗಿಡಕ್ಕೆ 72 ರೂ, 14-20ರ ಗಾತ್ರದ ಸಸಿಗೆ 111 ರೂ. ಮೀಸಲಿಡಲಾಗಿದೆ.ರೈತರು ಸಸಿಗಳನ್ನು ಪಡೆಯಲು ಸಸ್ಯಪಾಲನಾ ಕೇಂದ್ರಗಳಿಗೆ ಕರೆ ಮಾಡಿ ಸಂಪರ್ಕಿಸಬಹುದು.

ಚನ್ನಗಿರಿ- 94819-99523, ದಾವಣಗೆರೆ 94819-99424, ಹರಿಹರ 94819-99425, ಹೊನ್ನಾಳಿ 94819-99427, ಜಗಳೂರು- 94819-99428.
ಸಣ್ಣ ಗಾತ್ರದ ಸಸಿಗಳಿಷ್ಟು : ಮಹಾಗನಿ-83947, ಹೊಂಗೆ-72184, ತೇಗ- 36750, ನುಗ್ಗೆ-20014, ಬಿದಿರು- 14915, ಹೆಬ್ಬೇವು- 13806, ಹೊಳೆಮತ್ತಿ- 12143, ಸೀಮಾರುಬಾ-11631, ನೆರಳೆ- 10749, ಸಿಲ್ವರ್- 10647, ತಪಸಿ- 9682, ಪೇರಲ- 9558, ಕರಿಬೇವು- 7210, ಹುಣಸೆ-5225, ಅರಳಿ- 4942, ಹೊನ್ನೆ- 2848, ನೆಲ್ಲಿ- 1547, ಸೀತಾಲ- 1836, ಪತ್ರೆ- 960, ಬೀಟೆ-404 ಗಿಡಗಳಿವೆ.

Leave a Reply

Your email address will not be published. Required fields are marked *

error: Content is protected !!