jail prison; ದಾವಣಗೆರೆಯ 40 ಅಡಿ ಜೈಲಿನ ಕಾಂಪೌಂಡ್ ಹಾರಿ ತಪ್ಪಿಸಿಕೊಂಡಿದ್ದ ಆರೋಪಿ ಪುನಃ ಬಂಧನ

ದಾವಣಗೆರೆ; ದಾವಣಗೆರೆ ಸಬ್ ಜೈಲಿನಿಂದ jail prison ಪರಾರಿಯಾಗಿದ್ದ ಪೋಕ್ಸೋ ಅಡಿ ದಾಖಲಾದ ‌ಪ್ರಕರಣದ ಆರೋಪಿಯನ್ನ ಪುನಃ ಬಂಧಿಸಲಾಗಿದೆ.

ದಾವಣಗೆರೆ ಸಬ್ ಜೈಲಿನ 40 ಅಡಿಗೂ ಎತ್ತರದ ಗೋಡೆಯಿಂದ ಜಿಗಿದು ಪರಾರಿ ಆಗುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ. ನೆಲಕ್ಕೆ ಬಿದ್ದು ಕಾಲಿಗೆ ಪೆಟ್ಟಾದ್ರು ಲೆಕ್ಕಿಸದೇ ಓಡಿ ಹೋಗುವ ಆರೋಪಿಯ ವಿಡಿಯೋ ನೋಡಿದ್ರೆ ಈತ ಅಂತಿಂತ ಆಸಾಮಿಯಲ್ಲ ಎಂದು ಗೊತ್ತಾಗಿದೆ.

ಇದನ್ನೂ ಓದಿ:- jail compound; ದಾವಣಗೆರೆ ಜೈಲಿನ ಕಾಂಪೌಂಡ್ ಜಿಗಿದು ಖೈದಿ ಪರಾರಿ

ದಾವಣಗೆರೆಯ ಕರೂರು ವ್ಯಾಪ್ತಿಯ ಆಟೋ ಚಾಲಕ ವಸಂತ್ (23) ಪರಾರಿಯಾಗಿದ್ದ ಆರೋಪಿಯಾಗಿದ್ದಾನೆ.ದಾವಣಗೆರೆ ನಗರದ ಉಪ‌ಕಾರಾಗೃಹದ ಬೃಹತ್ ಎತ್ತರದ ಗೋಡೆ ಹತ್ತಿ ಜಿಗಿದು ಶನಿವಾಎ ಮದ್ಯಾಹ್ನ ಪರಾರಿಯಾಗಿದ್ದ ಆರೋಪಿಯನ್ನ ಭಾನುವಾರ ಮುಸುಕಿನಲ್ಲಿ ಬಂದಿಸಲಾಗಿದೆ.

ದಾವಣಗೆರೆ ಮಹಿಳಾ ಠಾಣೆಯಲ್ಲಿ ಪೋಕ್ಸೊ ಕಾಯ್ದೆಯಡಿ ದೂರು ದಾಖಲಾಗಿದ್ದ ಪ್ರಕರಣದ ಹಿನ್ನೆಲೆ ಎರಡು ದಿನಗಳ ಹಿಂದೆ ಬಂಧಿಸಿ ಜೈಲಿಗೆ ಕಳುಹಿಸಿದ್ದ ದಾವಣಗೆರೆ ಮಹಿಳಾ ಠಾಣೆ ಪೊಲೀಸರು.

Viral Video link

ಬಸವನಗರ ಪೊಲೀಸ್ ಠಾಣೆಯಲ್ಲಿ ಜೈಲಿನ ಸಿಬ್ಬಂದಿ ದೂರು ದಾಖಲು ಮಾಡಿದ್ದರು, ಜೈಲಿಂದ ತಪ್ಪಿಸಿ ಕೊಂಡ 24 ಗಂಟೆಯೊಳಗೆ ಆರೋಪಿಯನ್ನು ಪೋಲೀಸರು  ಬಂದಿಸಿದ್ದು ಈತಹರಿಹರ ತಾಲೂಕಿನ ದುಗ್ಗವತಿ ಬಳಿ ಪೊಲಿಸರಿಗೆ ಸಿಕ್ಕಿಬಿದ್ದಿದ್ದಾನೆ ಆರೋಪಿ ವಸಂತ್.

ಇದೀಗ ಆರೋಪಿಯನ್ನು ಹಿಡಿದು ಬಸವನಗರ ಪೊಲೀಸ್‌ ಠಾಣೆಗೆ ಕರೆತಂದಿರುವ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. ಒಟ್ಟಾರೆ ದಾವಣಗೆರೆ ಸಬ್ ಜೈಲಿನಲ್ಲಿ ಖೈದಿಗಳ ರಕ್ಷಣೆ ಬಗ್ಗೆ ಹಲವು ಅನುಮಾನ ವ್ಯಕ್ತಪಡಿಸುತ್ತಾರೆ ಸ್ಥಳೀಯರು.

Leave a Reply

Your email address will not be published. Required fields are marked *

error: Content is protected !!