ಮುಂದಿನ 48 ಗಂಟೆಯಲ್ಲಿ ಮಳೆ: ಕೃಷಿಕರಿಗೆ ಧಾರವಾಡ ಕೃಷಿ ವಿವಿ ಸಲಹೆ
ದಾವಣಗೆರೆ: ದೇಶಾದ್ಯಂತ ಫೆಬ್ರವರಿಯಲ್ಲಿ ಗಮನಾರ್ಹವಾದ ಬಿಸಿ ವಾತಾವರಣದಿಂದಾಗಿ ಮುಂಗಾರು ಪೂರ್ವ ಮಲೆ ಮುಂಚಿತವಾಗಿಯೇ ಆಗಮಿಸಿದೆ.
ಮುಂದಿನ 48 ಗಂಟೆಗಳಲ್ಲಿ ಕರ್ನಾಟಕದ ಉತ್ತರ ಒಳನಾಡಿನಾದ್ಯಂತ ಗುಡುಗು ಮಿಂಚು ಸಹಿತ ಮಳೆ ಆಗುವ ಸಂಭವವಿದೆ.
ಜೋಳ, ಕಡಲೆ, ಗೋಧಿ ಬೆಳೆ ಮೇವು, ಧಾನ್ಯಗಳನ್ನು ಎತ್ತರದ ಸ್ಥಳಧಲ್ಲಿ ರಾಶಿ ಹಾಕಿ ಪ್ಲಾಸ್ಟಿಕ್ ಪಾಟುಗಳಿಂದ ರಕ್ಷಿಸಿ. ಕೊಯ್ಲು ಮಾಡಲು ಸಿದ್ಧವಾಗಿರುವ ತರಕಾರಿಗಳು ಹಾಳಾಗುವುದನ್ನು ತಪ್ಪಿಸಲು ಹರಿದು ಮಾರಾಟ ಮಾಡುವುದು ಉತ್ತಮ. ಮಧ್ಯಾಹ್ನ ಹಾಗೂ ಸಂಜೆ ಜಾನುವಾರುಗಳನ್ನು ಮೇಯಲು ಹೊರಗೆ ಬಿಡಬೇಡಿ ಎಂದು ಎಂದು ಧಾರವಾಡ ಕೃಷಿ ವಿಶ್ವವಿದ್ಯಾಲಯ ಸಲಹೆ ನೀಡಿದೆ.