ಕ್ರೈಂ ಸುದ್ದಿ

Robbery; ಒಂಟಿ ಮಹಿಳೆಯಿದ್ದ ಮನೆಗೆ ನುಗ್ಗಿ ಹಲ್ಲೆ, ಚಿಕಿತ್ಸೆಗಾಗಿ ಇಟ್ಟ ಹಣ ದರೋಡೆ ಮಾಡಿದ ದುರುಳ

ದಾವಣಗೆರೆ : ನಗರದ ಪ್ರತಿಷ್ಠಿತ ಬಡಾವಣೆ ಮನೆಯೊಂದರಲ್ಲಿ ಒಂಟಿ ಮಹಿಳೆ ಇದ್ದ ವೇಳೆ ದರೋಡೆಕೋರನೊಬ್ಬ ಹಲ್ಲೆ ಮಾಡಿ ಹಣ ಕಿತ್ತುಕೊಂಡಿರುವ ಘಟನೆ ನಡೆದಿದ್ದು, ಸುತ್ತಮುತ್ತಲಿನ ಜನರಲ್ಲಿ ಭೀತಿ ಉಂಟಾಗಿದೆ.

ಈ ಘಟನೆ ಬುಧವಾರ ಬೆಳಗ್ಗೆ 11.30ಕ್ಕೆ ನಡೆದಿದ್ದು, ಹಲ್ಲೆಗೊಳಗಾದ ಮಹಿಳೆ ಆಸ್ಪತ್ರೆಗೆ ದಾಖಲು ಆಗಿದ್ದಾರೆ. ಈ ಘಟನೆ ದಾವಣಗೆರೆ ಕುಂದುವಾಡ ರಸ್ತೆಯಲ್ಲಿನ ಲೇಕ್ ವಿವ್ ಬಡಾವಣೆಯಲ್ಲಿ ನಡೆದಿದೆ. ಇದರಿಂದ ದಾವಣಗೆರೆಯಲ್ಲಿ ಪ್ರತಿಷ್ಠಿತ ಏರಿಯಾದ ಮನೆಗಳಲ್ಲಿ ಜನರಿಗೆ ಸೇಪ್ ಇಲ್ವಾ.??? ಎಂಬ ಪ್ರಶ್ನೆ ಎದ್ದಿದೆ. ದರೋಡೆಕೋರನೊಬ್ಬ ಹಾಡು ಹಗಲೇ ಮನೆಗೆ ನುಗ್ಗಿದ್ದು, ಈತನ ಚಲನವಲನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ದರೋಡೆಕೋರನಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಮನೆಯಲ್ಲಿ ಒಂಟಿ ಮಹಿಳೆ ಇರುವುದನ್ನು ಗಮನಿಸಿಯೇ ದರೋಡೆ ನಡೆದಿದ್ದು, ಈ ಮನೆ  ಶ್ರೀನಾಥ್ ಎಂಬುವರಿಗೆ ಸೇರಿದ್ದಾಗಿದ್ದು, ಶ್ರೀನಾಥ್ ಪತ್ನಿ ಯೊಗೇಶ್ವರಿ ಮನೆಯಲ್ಲಿದ್ದಾಗ ಘಟನೆ ನಡೆದಿದೆ. ಸುಮಾರು 5 ಲಕ್ಷಕ್ಕೂ ಅಧಿಕ ಹಣವನ್ನು ದರೋಡೆಕೋರರು ಲಪಟಾಯಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಗಾಯಾಳು ಯೊಗೇಶ್ವರಿಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕಳ್ಳನ ಎಂಟ್ರಿ ಮತ್ತು ಎಕ್ಸಿಟ್ ದೃಶ್ಯ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮಗನ ಚಿಕಿತ್ಸೆಗೆಂದು ಮನೆಯಲ್ಲಿ 5 ಲಕ್ಷ ಹಣ ಇಡಲಾಗಿತ್ತು. ಹೆಚ್ಚುವರಿ ಪೊಲೀಸ್ ಅಧೀಕ್ಷಕ, ರಾಮಗೊಂಡ ಬಸರಿಗೆ ಸ್ತ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳ್ಳನಿಗಾಗಿ ತಂಡ ರಚನೆ ಮಾಡಲಾಗಿದ್ದು, ಶೀಘ್ರವೇ ದರೋಡೆಕೋರನನ್ನು ಹಿಡಿಯಲಾಗುವುದು ಎಂದು ಎಸ್ಪಿ ಉಮಾಪ್ರಶಾಂತ್ ತಿಳಿಸಿದ್ದಾರೆ.

Click to comment

Leave a Reply

Your email address will not be published. Required fields are marked *

Most Popular

To Top