gambling raid; ಇಸ್ಪೀಟು ಅಡ್ಡೆ ಮೇಲೆ CEN ಪೋಲೀಸರ ದಾಳಿ; 3.12 ಲಕ್ಷ ವಶ, 20 ಜನರ ಬಂಧನ

ದಾವಣಗೆರೆ: gambling raid ದಾವಣಗೆರೆ ಜಿಲ್ಲೆಯ ವಿವಿಧೆಡೆ ಕಾನೂನು ಬಾಹಿರ ಚಟುವಟಿಕೆ ನಡೆಸುತ್ತಿದ್ದ ಅಡ್ಡೆಗಳ ಮೇಲೆ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ಎಸ್ ಪಿ  ಉಮಾಪ್ರಶಾಂತ್ ಪತ್ರಿಕಾ ಪ್ರಕಟಣೆಯಲ್ಲಿ ಸೋಮವಾರ ತಿಳಿಸಿದ್ದರು.

ಇಂದು ಮಂಗಳವಾರ ದಾವಣಗೆರೆ ಜಿಲ್ಲೆಯ ಜಗಳೂರು ತಾಲ್ಲೂಕಿನ ಕೊಡುಕುರಿ ಅಭಯಾರಣ್ಯ ಪ್ರದೇಶದ ಬಳಿಯ ಗೋಡೆ ಗ್ರಾಮದಿಂದ ತಾರೆಹಳ್ಳಿ  ಗ್ರಾಮದ ಕಡೆಗೆ ಹೋಗುವ ಮಾರ್ಗದಲ್ಲಿ ಭಾರಿ ಪ್ರಮಾಣದ ಇಸ್ಪೀಟು ಜೂಜಾಟ ಆಡುತ್ತಿದ್ದ ಬಗ್ಗೆ ಎಸ್ ಪಿ ಉಮಾ ಪ್ರಶಾಂತ್ ಅವರಿಗೆ ಮಾಹಿತಿ ಬಂದ ತಕ್ಷಣ ದಾವಣಗೆರೆ ಸಿ ಇ ಎನ್ ತಂಡಕ್ಕೆ ರೇಡ್ ಮಾಡಲು ತಿಳಿಸಿದ್ದೆ ತಡ ಆಕ್ಟೀವಾದ ಇನ್ಸಪೆಕ್ಟರ್ ಪ್ರಸಾದ್ ಅಂಡ್ ಟೀಮ್ ಅಡ್ಡೆ ಮೇಲೆ ದಾಳಿ ನಡೆಸಿ ಬರೋಬ್ಬರಿ 3 ಲಕ್ಷದ 12 ಸಾವಿರ ಹಣ ಜಪ್ತಿ ಮಾಡಿ ದುರ್ಗೇಶ್ ಮತ್ತು 20 ಜನರನ್ನ ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.

family court; ಮದುವೆ ಮನೆಯಾದ ಕೌಟುಂಬಿಕ ಕೋರ್ಟ್

ನೂತನವಾಗಿ ಅಧಿಕಾರ ತೆಗೆದುಕೊಳ್ಳುವ ವೇಳೆ ಹೇಳಿದ ಹಾಗೆ ಎಸ್ ಪಿ ಮೇಡಂ ಅಕ್ರಮ ದಂಗೆಗಳನ್ನು ನಡೆಯಲು ಬಿಡುವುದಿಲ್ಲ ಎಂದು. ಅದೇ ರೀತಿಯಲ್ಲಿ ಜಿಲ್ಲೆಯ ಪೋಲಿಸ್ ಅಧಿಕಾರಿಗಳಿಗೆ ಸೂಚನೆ ನೀಡಿ ದಂಧೆಯಲ್ಲಿ ತೊಡಗಿರುವವರ ಹೆಡೆ ಮುರಿಕಟ್ಟುತ್ತಿದ್ದಾರೆ.

ಆಗಸ್ಟ್ 25ರಿಂದ ಸೆಪ್ಟೆಂಬರ್ 10ರ ವರೆಗೆ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಡೆದ ಪ್ರಕರಣಗಳ ಮಾಹಿತಿಯನ್ನು ಪೊಲೀಸ್ ಇಲಾಖೆ ನೀಡಿದೆ. ಜಿಲ್ಲೆಯಲ್ಲಿ ಒಟ್ಟು ಮಟ್ಕಾ ಜೂಜಾಟ 17 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದು, 1,44,225 ವಶಪಡಿಸಿಕೊಳ್ಳಲಾಗಿದೆ. 42 ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಇಸ್ಪೀಟ್ ಜೂಜಾಟ ಸಂಬಂಧ 18 ಪ್ರಕರಣ ದಾಖಲಾಗಿದ್ದು, 2,56,140 ವಶಪಡಿಸಿಕೊಳ್ಳಲಾಗಿದೆ. 93 ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಗೋಲಿ ಬೆಟ್ಟಿಂಗ್ ಪ್ರಕರಣದಲ್ಲಿ 8,550 ಹಾಗೂ 14,000 ಎರಡು ಪ್ರಕರಣದಲ್ಲಿ ವಶಪಡಿಸಿ ಕೊಂಡಿದ್ದು, 5 ಮತ್ತ 7 ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಅಕ್ರಮ ಮದ್ಯ ಮಾರಾಟ ಸಂಬಂಧ 9 ಪ್ರಕರಣ ದಾಖಲಾಗಿದ್ದು, 9,418 ಮೌಲ್ಯದ ಮದ್ಯವನ್ನು ಜಪ್ತಿ ಮಾಡಲಾಗಿದೆ. 9 ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಅವರು ತಿಳಿಸಿದ್ದಾರ

Leave a Reply

Your email address will not be published. Required fields are marked *

error: Content is protected !!