ಸೋಮೇಶ್ವರ ಬೀಚ್ ಹಲ್ಲೆ ಪ್ರಕರಣ; ಐವರ ಸೆರೆ, ನೈತಿಕ ಪೊಲೀಸ್‌ಗಿರಿ ಆರೋಪದ ಬಗ್ಗೆ ತನಿಖೆ

ಸೋಮೇಶ್ವರ ಬೀಚ್ ಹಲ್ಲೆ ಪ್ರಕರಣ; ಐವರ ಸೆರೆ, ನೈತಿಕ ಪೊಲೀಸ್‌ಗಿರಿ ಆರೋಪದ ಬಗ್ಗೆ ತನಿಖೆ

ಮಂಗಳೂರು: ಮಂಗಳೂರಿನ ಸೋಮೇಶ್ವರ ಬೀಚ್‌ ಬಳಿ ನಡೆದ ಹಲ್ಲೆ ಪ್ರಕರಣ ಕುರಿತಂತೆ ಪೊಲೀಸರು ಐವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ವಿದ್ಯಾರ್ಥಿನಿಯರ ಜೊತೆ ಅನುಮಾನಾಸ್ಪದ ರೀತಿ ಓಡಾಡುತ್ತಿದ್ದರೆಂಬ ಕಾರಣಕ್ಜಾಗಿ ಸ್ಥಳೀಯರು ಕೇರಳ ಮೂಲದ ಮೂವರು ಯುವಕರ ಮೇಲೆ ಹಲ್ಲೆ ನಡೆಸಿದ್ದಾರೆನ್ನಲಾಗಿದೆ.

ಈ ನಟನೆಯನ್ನು ನೈತಿಕ ಪೊಲೀಸ್‌ಗಿರಿ ಎಂಬ ಕೆಲವರು ಆರೋಪಿಸಿದ್ದಾರೆ. ಈ ಬಗ್ಗೆ ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ಉಳ್ಳಾಲ ಸುತ್ತಮುತ್ತಲ ಐವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!