ನಿಷ್ಕರ್ಷ ಚಿತ್ರ ನೆನಪು ಮಾಡಿದ ಟ್ರೆಂಡ್ಸ್ ಶಾಪ್ ಘಟನೆ.! ಕಳ್ಳ ಬಂದಿದ್ದು ನಿಜ.! ಹೋರಗೆ ಹೋಗಿದ್ದು ನಿಗೂಡ.!

ದಾವಣಗೆರೆ: ಸಾಹಸ ಸಿಂಹ ಅಭಿನಯದ ನಿಷ್ಕರ್ಷ ಚಲನ ಚಿತ್ರವೊಂದರಲ್ಲಿ, ಬ್ಯಾಂಕ್ ದರೋಡೆ ಬಂದಿದ್ದವರು ಡಕ್ ಸಹಾಯದ ಮೂಲಕ ಹೊರ ಬಂದು ಹೆಲಿಕಾಪ್ಟರ್ ಮೂಲಕ ಹೊರ ಹೋಗುತ್ತಿರುವ ನಿಮಗೆಲ್ಲ ಗೊತ್ತೇ ಇದೆ…ಆದರೆ ಇಂತಹದ್ದೇ ಪ್ರಕರಣ ದಾವಣಗೆರೆ ಜಿಲ್ಲೆಯಲ್ಲಿ ನಡೆದಿದ್ದು, ಕಳ್ಳ ಬ್ಯಾಂಕ್ ಗೆ ಹೋಗಲಿಲ್ಲ.. ಬದಲಾಗಿ ಬಟ್ಟೆ ಅಂಗಡಿಗೆ ಡಕ್ ಮೂಲಕ ಹೋಗಿದ್ದಾನೆ. ಆದರೆ ಹೊರ ಹೋಗಿರುವುದು ಮಾತ್ರ ನಿಗೂಢವಾಗಿದೆ.

ಮಹಾತ್ಮಗಾಂಧಿ ವೃತ್ತದಲ್ಲಿನ ಪಿಬಿ ರಸ್ತೆಯಲ್ಲಿರುವ ಟ್ರೇಂಡ್ಸ್ ಅಂಗಡಿಯಲ್ಲಿ ಘಟನೆ ನಡೆದಿದೆ. ಕಳ್ಳನೊಬ್ಬ ಮಧ್ಯರಾತ್ರಿ ಮೂರು ಗಂಟೆಗೆ   ಅಂಗಡಿಯ ಟ್ರೆಂಡ್ಸ್ ಪಿಓಪಿ ಡಕ್ ಮೂಲಕ ಅಂಗಡಿಗೆ ನುಗ್ಗಿದ್ದಾರೆ. ಯಾವುದೇ ಅಡ್ಡ ಭೀಮ್ ಇಲ್ಲದೇ ಸುಮಾರು 150 ಅಡಿ ವಿಸ್ತಾರದ ಪಿಒಪಿ ಡಕ್ ಒಳಗೆ ಇಬ್ಬರು ಹೋಗಿದ್ದಾರೆ.ಈ ಸಂದರ್ಭದಲ್ಲಿ ಸೈರನ್ ಕೂಗಿದೆ. ಆದರೂ ಕೂಡ ಕಳ್ಳ ಹೊರಬರಲೇ ಇಲ್ಲ…ಸುತ್ತಲೂ ಗೋಡೆಗಳಿದ್ದು, ಯಾವುದೇ ಕಿಟಕಿಗಳು ಸಹ ಅಂಗಡಿಯಲ್ಲಿ ಇಲ್ಲ. ಹೋದ ದಾರಿಯಲ್ಲಿಯೇ ಕಳ್ಳ ವಾಪಸ್ ಬರಬೇಕಿತ್ತು. ಆದರೆ ಕಳ್ಳ ಪಾತ್ರ ವಾಪಸ್ ಬಂದಿಲ್ಲ..ದಾವಣಗೆರೆ ಕೆಟಿಜೆ ನಗರ ಪೊಲೀಸರು ಸ್ಥಳಕ್ಕೆ ಧಾವಿಸಿ ಸುಮಾರು ಅರ್ಧ ದಿನ ಹುಡುಕಿದ್ದಾರೆ ಆದರೆ ಕಳ್ಳನ ಸುಳಿವು ಮಾತ್ರ ಸಿಕ್ಕಿಲ್ಲ..ಈ ಕಾರಣದಿಂದ ಕಳ್ಳ ಎಲ್ಲಿ ಹೋದ ಎಂಬ ಬಗ್ಗೆ ಖಾಕಿ ಪಡೆಗೆ ತಲೆನೋವಾಗಿದೆ.

ಶನಿವಾರ ಬೆಳಗಿನ ಜಾವ ಮೂರುಗಂಟೆಯಲ್ಲಿ ಟ್ರೇಂಡ್ಸ್ ಬಟ್ಟೆ ಅಂಗಡಿಗೆ ಹೊರಗಿದ್ದ ಫ್ಲೆಕ್ಸ್ ಆ್ಯಂಗುಲರ್ ಸಹಾಯದಿಂದ ಮೇಲಕ್ಕೆ ಹತ್ತಿ ಅಲ್ಲಿಂದ ಅಂಗಡಿಯಲ್ಲಿ ಅಳವಡಿಸಿದ್ದ ಪಿಒಪಿ ಡಕ್ ಮೂಲಕ ಒಳ ನುಸುಳಿದ್ದಾನೆ. ಇದಾದ ನಂತರ ಸೈರನ್ ಕೂಗತೊಡಗಿದೆ. ನಂತರ ಮುಂಬೈನಲ್ಲಿದ್ದ ಮುಖ್ಯಸ್ಥರಿಗೆ ಕಂಪನಿ ಸಂದೇಶ ದೊರೆತಿದ್ದು ತಕ್ಷಣ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೆಲ ಸಮಯದಲ್ಲೇ ಅಂಗಡಿಯ ವ್ಯವಸ್ಥಾಪಕರೊಂದಿಗೆ ಕೆಟಿಜೆ ನಗರ ಠಾಣಿ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಬಳಿಕ ಅಂಗಡಿ ಶೆಟರ್ಸ್ ತೆಗೆದು ಶೋಧ ಕಾರ್ಯ ನಡೆಸಿದ್ದಾರೆ.

ಬ್ಯಾಟರಿ ಹಿಡಿದು ಡಕ್ ಒಳಗೆ ಹೋದ ಪೊಲೀಸರು ;  ಅಂಗಡಿಯ ಡಕ್ ನ ಒಳಗೆ ಬ್ಯಾಟರಿ ಹಿಡಿದು ಹೊರಟ ಟ್ರೆಂಡ್ಸ್ ಪೊಲೀಸರು, ವಿದ್ಯುತ್ ವೈರ್ ಸರಿಸಿ ಮುಂದೆ ಹೊರಟಿದ್ದಾರೆ. ಸುಮಾರು ಅರ್ಧ ದಾರಿಯವರೆಗೂ ದಾರಿ ಸಾಗಿದ್ದಾರೆ ಅಲ್ಲಲ್ಲಿ ಡಕ್ ಒಡೆದು ನೋಡಿದ್ದಾರೆ. ಆದರೆ ಕಳ್ಳನ ಪಾತ್ರ ಸುಳಿವು ಸಿಗಲಿಲ್ಲ.ಇನ್ನು ಅಂಗಡಿಯಲ್ಲಿದ್ದ ಸಿಸಿ ಕ್ಯಾಮರಾದಲ್ಲಿ ಕಳ್ಳ ಒಳಗೆ ನುಸುಳಿದ್ದ ದೃಶ್ಯಾವಳಿ ಸೆರೆಯಾಗಿದೆ. ಆದರೆ ಆತ ಹೊರಗೆ ಹೋದ ಬಗ್ಗೆ ಯಾವುದೇ ದೃಶ್ಯಗಳಿಲ್ಲ. ಸೆಲ್ಲರ್‌ಗೆ ಹಾಕಿದ್ದ ಬೀಗ ಕೂಡ ಹಾಗೇ ಇದೆ. ಲಿಫ್ಟ್ ಕೂಡ ಕೆಟ್ಟಿತ್ತು. ಅಂಗಡಿಯಲ್ಲಿ ಕಿಟಕಿಗಳಿಲ್ಲದ್ದರಿಂದ ಹೊರಹೋಗಲು ಅವಕಾಶವೂ ಇಲ್ಲ.

ಮಧ್ಯವಯಸ್ಕ ಮತ್ತು ವಿಕಲಾಂಗನಂತಿರುವ ಕಳ್ಳ, ಮುಖಕ್ಕೆ ಕರವಸ್ತ್ರ ಕಟ್ಟಿ ಕೊಂಡಿದ್ದು, ಒಂದೇ ಕೈನಲ್ಲಿ ಎಲ್ಲವನ್ನೂ ಆಪರೇಟ್ ಮಾಡುತ್ತಿದ್ದ ಎನ್ನಲಾಗಿದೆ. ನಗದು ಅಥವಾ ಯಾವುದೇ ವಸ್ತು ಕಳವಾಗಿಲ್ಲ. ಅಂಗಡಿ ವ್ಯವಸ್ಥಾಪಕ ಚಂದ್ರಶೇಖರ್ ನೀಡಿದ ದೂರಿನನ್ವಯ ಕೆಟಿಜೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹುಡುಕಾಟದ ಬಳಿಕ ಸಂಜೆ ನಂತರ ಅಂಗಡಿ ನಡೆಸಲು ಅನುಮತಿ ನೀಡಲಾಗಿತ್ತು. ಒಟ್ಟಾರೆ ಒಳ ಹೋದ ಕಳ್ಳ ಹೊರ ಹೋದ ಬಗ್ಗೆ ಇನ್ನೂ ಸುಳಿವು ಸಿಕ್ಕಿಲ್ಲ… ಸ್ಥಳಕ್ಕೆ ಡಿವೈಎಸ್ಪಿ ಮಲ್ಲೇಶ್ , ಕೆಟಿಜೆ ನಗರ ಠಾಣೆ ಪಿಐ ಶ್ರೀಧರ್ ಭೇಟಿ ನೀಡಿದ್ದಾರೆ

Leave a Reply

Your email address will not be published. Required fields are marked *

error: Content is protected !!