ರಾಜ್ಯದ ಹಿರಿಯ ಸಂಸದ ಜಿಎಂ ಸಿದ್ದೇಶ್ವರಗೆ ವಾಟ್ಸ್ ಆಪ್ ವಿಡಿಯೋ ಕಾಲ್ ಬೆದರಿಕೆ.! ದೂರು ದಾಖಲು
ದಾವಣಗೆರೆ: ದಾವಣಗೆರೆ ಜಿಲ್ಲೆಯ ಹಿರಿಯ ಸಂಸದರಾದ ಜಿಎಂ ಸಿದ್ದೇಶ್ವರ ಅವರಿಗೆ ಅಪರಿಚಿತ ಓರ್ವ ಮಹಿಳೆ ವಾಟ್ಸ್ ಆಪ್ ಮೂಲಕ ಅಸಭ್ಯ ವರ್ತನೆ ತೋರಿ ಬೆದರಿಕೆ ಹಾಕಿದ ಪ್ರಕರಣ ನಡೆದಿದೆ. ಜುಲೈ 20 ರಂದು ರಾತ್ರಿ ಮೊದಲು ಮೆಸೇಜ್ ಮಾಡಿ ಆಮೇಲೆ ಬೆತ್ತಲೇ ವಿಡಿಯೋ ಕಾಲ್ ಮಾಡಿ ಬೆದರಿಕೆಯಾಕಿದ್ದಾಳೆ ಎಂದು ದಾವಣಗೆರೆ ಸಂಸದ ಸಿದ್ದೇಶ್ವರ್ ರಿಂದ ಬೆಂಗಳೂರಿನ ಕಮರ್ಷಿಯಲ್ ಪೊಲೀಸ್ ಠಾಣೆಗೆ ದೂರು ದಾಖಲು ಮಾಡಿರುವ ಘಟನೆ ನಡೆದಿದೆ.
71 ವರ್ಷದ ಜಿ.ಎಂ. ಸಿದ್ದೇಶ್ವರ್ ರಿಗೆ ಅಪರಿಚಿತ ಮಹಿಳೆ ವಿಡಿಯೋ ಕಾಲ್ ಮಾಡಿ ನಗ್ನವಾಗಿ ಪೋಟೋ ತೆಗೆದುಕೊಂಡಿರೋ ಆರೋಪ ಕೇಳಿಬಂದಿದ್ದು, ಜುಲೈ 20ರ ರಾತ್ರಿ 10.16ಕ್ಕೆ ಅಪರಿಚಿತ ಲೇಡಿಯಿಂದ ಮೊದಲು Hi How Are You ಅಂತ ಮೆಸೇಜ್ ಮಾಡಿದ್ದಾಳೆ ಅಪರಿಚಿತ ಮಹಿಳೆ. ಸಂಸದರಿಂದ ಆ ಮೇಸೆಜ್ ಗೆ ಯಾವುದೇ ಪ್ರತಿಕ್ರಿಯೆ ನೀಡದೆ ಮಾಡಿರುವುದಿಲ್ಲ ಅದೇ ಅಪರಿಚಿತ ಮಹಿಳೆಯ ಮೆಸೇಜ್ಗೆ ಯಾವುದೇ ಪ್ರತಿಕ್ರಿಯೆ ನೀಡದ ಸಂಸದರಿಗೆ ಪುನಃ ರಾತ್ರಿ 10.22ಕ್ಕೆ ದಿಢೀರ್ ಅಂತ ವಿಡಿಯೋ ಕಾಲ್ ಮಾಡಿದ್ದರಂತೆ ಆ ಅಪರಿಚಿತ ಮಹಿಳೆ. ಯಾರು, ಏನು ಅಂತ ಕೇಳುತ್ತಿದ್ದಂತೆ ಹಿಂದಿಯಲ್ಲಿ ಮಾತನಾಡಿದ್ದು, ಬಳಿಕ ಮತ್ತೆ ರಾತ್ರಿ 10.24ಕ್ಕೆ ವಾಟ್ಸ್ಪ್ ಆಡಿಯೋ ಕಾಲ್ ಮಾಡಿ ಮತ್ತದೇ ಅಸಭ್ಯ ಮಾತುಗಳನ್ನ ಆಡಿದ್ದಾಳೆ, ಕಾಲ್ ಕಟ್ ಮಾಡಿದ್ರು ಮತ್ತೆ ಮತ್ತೆ ಕಾಲ್ ಮಾಡ್ತಿದ್ದರಂತೆ ಅಪರಿಚಿತ ಮಹಿಳೆ.
ಮತ್ತೆ ರಾತ್ರಿ 10.27ಕ್ಕೆ ವಾಟ್ಸಪ್ ವಿಡಿಯೋ ಕಾಲ್ ಮಾಡಿ ಬೆತ್ತಲೆಯಾಗಿ ಮಾತನಾಡಲು ಪ್ರಾರಂಭಿಸಿದಾಗ ಸಂಸದರು ತಮ್ಮ ಪತ್ನಿಯವರಿಗೆ ಈ ಬಗ್ಗೆ ಗಮನಕ್ಕೆ ತಂದಿದ್ದಾರೆ ತದ ನಂತರ ಆ ಕಾಲ್ ಕಟ್ ಮಾಡಿದ್ದಾರೆ, ಮತ್ತೆ ಕಾಲ್ ಮಾಡಿ ಸಂಸದರ ಭಾವಚಿತ್ರ ಹಾಗೂ ಅಸಭ್ಯ ರೀತಿಯ ಪೊಟೊಗಳ ಜೊತೆ ಜೋಡಿಸಿ ವಿಡಿಯೋ ರೆಕಾರ್ಡ್ ನ್ನ ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದಾಳೆ ಎಂದು ಆರೋಪಿಸಿ ಈ ಘಟನೆ ಸಂಬಂಧ ಬೆಂಗಳೂರಿನ ಕಮರ್ಷಿಯಲ್ ಸ್ಟ್ರೀಟ್ ಠಾಣೆಯಲ್ಲಿ ಎಫ್ ಐ ಆರ್ ದಾಖಲು ಮಾಡಲಾಗಿದೆ. ಇದೆಲ್ಲಾ ಘಟನೆ ಕರ್ಮಷಿಯಲ್ ಠಾಣಾ ವ್ಯಾಪ್ತಿಯಲ್ಲಿದ್ದ ಸಂದರ್ಭದಲ್ಲಿ ಬಂದಿದ್ದ ಪೋನ್ ಎಂದು ತಿಳಿದಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನ ಪೋಲೀಸರು ನಡೆಸುತ್ತಿದ್ದಾರೆ.